ಯಾಜ್ಞವಲ್ಕ್ಯ ಜಯಂತಿ

ಪ್ರಾಚೀನ ತತ್ವಜ್ಞಾನಿ

ಯಾಜ್ಞವಲ್ಕ್ಯ ಹಿಂದೂ ವೈದಿಕ ಋಷಿ. ಉಪನಿಷತ್ತಿನಲ್ಲಿ ಉಲ್ಲೇಖಿಸಲ್ಪಟ್ಟಿರುವ, ಪ್ರಾಯಶಃ ಪ್ರಾಚೀನ ಭಾರತದ ವಿದೇಹ ಪ್ರದೇಶದಲ್ಲಿ, ಸುಮಾರು 8ನೇ ಶತಮಾನ ಮತ್ತು ಕ್ರಿ.ಪೂ. ದ ನಡುವೆ ವಾಸಿಸಿದಿರಬಹುದು ಎಂದು ಊಹಿಸಲಾಗಿದೆ.

ಯಾಜ್ಞವಲ್ಕ್ಯನು ಇತಿಹಾಸದಲ್ಲಿ ದಾಖಲಿಸಿದ ಅತ್ಯಂತ ಪ್ರಾಚೀನ ತತ್ವಜ್ಞಾನಿಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ವಿಶ್ವಮಾನವ ಆತ್ಮವನ್ನು ಕಂಡುಹಿಡಿಯಲು ಅಸ್ತಿತ್ವ, ಪ್ರಜ್ಞೆ ಮತ್ತು ಅಪರಿಮಿಣತೆಯ ಸ್ವರೂಪವನ್ನು ಕುರಿತು ಆಧ್ಯಾತ್ಮಿಕ ಪ್ರಶ್ನೆಗಳನ್ನು ಯಾಜ್ಞವಲ್ಕ್ಯ ಪ್ರಸ್ತಾಪಿಸುತ್ತಾನೆ ಮತ್ತು ಚರ್ಚಿಸುತ್ತಾನೆ. ಲೌಕಿಕ ಸಂಬಂಧಗಳನ್ನು ತ್ಯಾಗ ಮಾಡುವ ಅವರ ವಿಚಾರಗಳು ಹಿಂದೂ ಸಂನ್ಯಾಸ ಸಂಪ್ರದಾಯಗಳಿಗೆ ಬಹಳ ಮುಖ್ಯವಾಗಿವೆ.

ಯಾಜ್ಞವಲ್ಕ್ಯ ಗ್ರಂಥಗಳಲ್ಲಿ ಯಾಜ್ಞವಲ್ಕ್ಯ ಸ್ಮೃತಿ, ಯೋಗ ಯಾಜ್ಞವಲ್ಕ್ಯ ಮತ್ತು ವೇದಾಂತ ಪಂಥದ ಕೆಲವು ಗ್ರಂಥಗಳು ಸೇರಿವೆ. ವಿವಿಧ ಬ್ರಾಹ್ಮಣ ಮತ್ತು ಅರಣ್ಯಕಗಳಲ್ಲಿ ಉಲ್ಲೇಖಿತವಾಗಿದೆ.

ಅವರು ವೇದಾಧ್ಯಯನಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸ್ವಾಗತಿಸುತ್ತಾರೆ. ಹಿಂದೂ ಗ್ರಂಥಗಳಲ್ಲಿ ಗಾರ್ಗಿ ವಾಚಕ್ನವೀ ಮತ್ತು ಮೈತ್ರೇಯಿ ಎಂಬ ಇಬ್ಬರು ಮಹಿಳಾ ತತ್ವಜ್ಞಾನಿಗಳೊಂದಿಗೆ ಅವರ ಸಂಭಾಷಣೆಗಳು ಇವೆ.

ಇತಿಹಾಸ

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯನಿಗೆ ಇಬ್ಬರು ಪತ್ನಿಯರು. ಒಬ್ಬಳು ಮೈತ್ರೇಯಿ, ಒಬ್ಬ ವಿದ್ವಾಂಸನ ಹೆಂಡತಿಯಂತೆ ಅವಳು ಆತನಿಗೆ ತಾತ್ವಿಕ ಪ್ರಶ್ನೆಗಳನ್ನು ಕೇಳುತ್ತಾಳೆ ಮತ್ತು ಗೃಹಿಣಿ ಎಂದು ಹೆಸರಿಸಲಾದ ಇನ್ನೊಬ್ಬಳು ಕಾತ್ಯಾಯನಿ. ಯಜ್ಞವಲ್ಕ್ಯ ಎಂಬ ಹೆಸರು ‘ಯಜ್ಞ’ದಿಂದ ಬಂದಿದೆ.

ಕೊಡುಗೆ

ಸಂಸ್ಕೃತದಲ್ಲಿ ಅವರು ರಚಿಸಿದ ಅನೇಕ ಪ್ರಮುಖ ಪ್ರಾಚೀನ ಗ್ರಂಥಗಳಾದ ಶುಕ್ಲ ಯಜುರ್ವೇದ, ಶತಪಥ ಬ್ರಾಹ್ಮಣ, ಬೃಹದಾರಣ್ಯಕ ಉಪನಿಷತ್ತು, ಯಾಜ್ಞವಲ್ಕ್ಯ ಸ್ಮೃತಿ, ಬೃಹದ್ ಯಾಜ್ಞವಲ್ಕ್ಯ ಎಂಬ ಗ್ರಂಥಗಳು ಧರ್ಮಶಾಸ್ತ್ರಕ್ಕೆ ಸಂಬಂಧಿಸಿದೆ.