ರಾಷ್ಟ್ರೀಯ ಧ್ವಜ ದಿನ

ರಾಷ್ಟ್ರೀಯ ಧ್ವಜ ದಿನ ಅಥವಾ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಡಿಸೆಂಬರ್ 7 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ.

ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ವಿಭಿನ್ನವಾಗಿ ಈ ದಿನವನ್ನು 1949 ರಿಂದಲೂ ಆಚರಿಸುತ್ತ ಬರಲಾಗುತ್ತಿದೆ. ಪ್ರತಿವರ್ಷವೂ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೂ ಗೌರವ ನೀಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಸ್ವಾತಂತ್ರ್ಯಾನಂತರ ಭಾರತಕ್ಕೆ, ತನ್ನ ದೇಶವನ್ನು ಕಾಯುವ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಬಂತು. ಇದರ ಫಲವಾಗಿ ಪುಟ್ಟ ಧ್ವಜವನ್ನು ಸಾರ್ವಜನಿಕರಿಗೆ ನೀಡಿ, ಅವರ ಮೂಲಕ ಕೈಲಾದಷ್ಟು ದೇಣಿಗೆ ಪಡೆದು, ಅದನ್ನು ಸೇನೆಗೆ ಅರ್ಪಿಸುವ ಈ ಮಹೋನ್ನತ ಕೆಲಸ ಆರಂಭವಾಯಿತು.

ಈ ದೇಣಿಗೆಯಿಂದ ಸಂಗ್ರಹವಾದ ಹಣವನ್ನು ಸೈನಿಕರು ಮತ್ತು ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ, ಯುದ್ಧದ ಸಮಯದ ಅಗತ್ಯಕ್ಕೆ, ಮಾಜಿ ಸೈನಿಕರು ಮತ್ತವರ ಕುಟುಂಬದ ಕಲ್ಯಾಣಕ್ಕೆ ಬಳಸಲಾಗುತ್ತದೆ.