ರಾಧಾ ಜಯಂತಿ

ರಾಧಾ ಜಯಂತಿ ಅಥವಾ ರಾಧಾಸ್ತಮಮಿ ಎಂಬುದು ಒಂದು ಹಿಂದೂ ಹಬ್ಬವಾಗಿದ್ದು, ಇದು ಭಗವಾನ್ ಕೃಷ್ಣನ ಪತ್ನಿಯಾದ ರಾಧೆ ಅಥವಾ ರಾಧಿಕ ನ ಜಯಂತಿಯ ಅಂಗವಾಗಿ ಆಚರಿಸಲಾಗುತ್ತದೆ. ಈ ದಿನದಂದು ರಾಧಾ ದೇವಿ ಜನಿಸಿದಳು ಎಂದು ಜನರು ನಂಬಿರುವುದರಿಂದ ಈ ಹಬ್ಬವನ್ನು ರಾಧಾ ಜಯಂತಿ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಉಪವಾಸ ವ್ರತವನ್ನು ಆಚರಿಸಿ, ಪೂಜಾ ವಿಧಿವಿಧಾನಗಳ ಪ್ರಕಾರ ಪೂಜೆ ಮಾಡಬಹುದು.

ಆಚರಣೆಗಳು

ಈ ದಿನದಂದು ಭಕ್ತರು ಬೇಗ ಎದ್ದು ಸ್ನಾನ ಮಾಡಬೇಕು. ಶುಭ್ರ ವಾದ ಬಟ್ಟೆಗಳನ್ನು ಧರಿಸಿ ಸೂರ್ಯದೇವರಿಗೆ ಅರ್ಘ್ಯವನ್ನು ಅರ್ಪಿಸಿ.  ನಿಮ್ಮ ಪೂಜಾ ಕೋಣೆಯಲ್ಲಿ ಕಲಶವನ್ನು ಇರಿಸಿ.  ಈಗ ಕಲಶದ ಮೇಲೆ ತಾಮ್ರದ ಪಾತ್ರೆ/ತಟ್ಟೆಯನ್ನು ಇಡಿ.  ರಾಧಾ ದೇವಿಯ ವಿಗ್ರಹಕ್ಕೆ ಪಂಚಾಮೃತ ದಿಂದ ಸ್ನಾನ ಮಾಡಿ. ದೇವಿಯ ವಿಗ್ರಹವನ್ನು ಹೊಸ ಬಟ್ಟೆ, ಹೂವು, ಆಭರಣ ಮತ್ತಿತರ ಅಲಂಕಾರಕ್ಕೆ ಬಳಸುವ ವಸ್ತುಗಳಿಂದ ಅಲಂಕರಿಸಿ.   ಈಗ ಕಲಶದ ಮೇಲೆ ಇರಿಸಿದ ತಾಮ್ರದ ಪಾತ್ರೆ/ತಟ್ಟೆಯಲ್ಲಿ ರಾಧಾ ದೇವಿಯ ವಿಗ್ರಹವನ್ನು ಇರಿಸಿ. ದೇವಿಗೆ ಪ್ರಸಾದ ಮತ್ತು ಇತರ ನೈವೇದ್ಯಗಳನ್ನು ಅರ್ಪಿಸಿ ಮತ್ತು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಪ್ರಾರ್ಥನೆ ಸಲ್ಲಿಸಿ.    ದೇವಿಯ ಆರತಿಯನ್ನು ಮಾಡಿ. ಈಗ ಅಗತ್ಯವಿರುವವರಿಗೆ ಮತ್ತು ಪ್ರೀತಿಪಾತ್ರರಿಗೆ ಪ್ರಸಾದ ವನ್ನು ವಿತರಿಸಿ.

ಮಹತ್ವ

ಕೆಲವು ಧರ್ಮಗ್ರಂಥಗಳ ಪ್ರಕಾರ, ರಾಧಾ ದೇವಿಯು ಮಹಾಲಕ್ಷ್ಮಿ ದೇವಿಯ ಅವತಾರ. ನೀರಿನ ಮೇಲ್ಮೈಯಲ್ಲಿ ದೈವಿಕ ತಾವರೆಯಿಂದ ರಾಧೆ ಯು ಜನಿಸಿದ್ದು, ನಂತರ ವೃಷಭಭಾನು ಮತ್ತು ಆತನ ಪತ್ನಿ ಕಮಲಾವತಿ ಅಥವಾ ಕೀರ್ತಿ ಯಿಂದ ಪತ್ತೆಯಾಯಿತು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣ ಮತ್ತು ರಾಧೆಯನ್ನು ದೈವಿಕ ಮತ್ತು ನಿಜವಾದ ಪ್ರೀತಿಯ ಸಂಕೇತವಾಗಿ ನೋಡಲಾಗುತ್ತದೆ.