ಮಹತ್ವ ಮತ್ತು ಆಚರಣೆ
ದೇಶದ ಉತ್ತರ ಭಾಗದಲ್ಲಿ ಆಚರಿಸಲಾಗುವ ಪ್ರಮುಖ
ಮತ್ತು ಮಹತ್ವದ ಹಬ್ಬವೆಂದರೆ ‘ಕರವಾ/ ಕರ್ವಾ ಚೌತ್’.
ವಿವಾಹಿತ ಹಿಂದೂ ಮತ್ತು ಸಿಖ್ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುವ ಮೂಲಕ ಕರವಾ
ಚೌತ್ ಆಚರಿಸುತ್ತಾರೆ.
ಹಬ್ಬ ಆಚರಿಸುವುದರ ಹಿಂದಿನ ಉದ್ದೇಶವು ತಮ್ಮ
ಪತಿಯ ಯೋಗಕ್ಷೇಮ, ಸಮೃದ್ಧಿ, ಆಯುಷ್ಯಕ್ಕಾಗಿ ಪ್ರಾರ್ಥಿಸುವುದು ಮತ್ತು ಹಾರೈಸುವುದು. ಇದು ಮಹಿಳೆಯರು
ಆಚರಿಸುವ ಒಂದು ಹಗಲು ಉತ್ಸವವಾಗಿದೆ. ಅನೇಕ ಹಿಂದೂ ಹಬ್ಬಗಳಂತೆ ಕರವಾ ಚೌತ್ ಕೂಡ ಚಾಂದ್ರ-ಸೌರ ಕ್ಯಾಲೆಂಡರ್ನ
ಮೇಲೆ ಆಧಾರಿತವಾಗಿದ್ದು, ಎಲ್ಲಾ ಖಗೋಳೀಯ ಸ್ಥಾನಗಳನ್ನು, ವಿಶೇಷವಾಗಿ ಚಂದ್ರನ ಸ್ಥಾನಗಳನ್ನು ಲೆಕ್ಕ
ಹಾಕಲು ಆಧಾರವಾಗಿ ಬಳಸಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ಬರುವ ಹಿಂದೂ ಸೌರಮಾನ
ಪಂಚಾಂಗದಲ್ಲಿ ಹುಣ್ಣಿಮೆಯ ನಾಲ್ಕನೇ ದಿನ ಈ ಹಬ್ಬ ನಡೆಯುತ್ತದೆ.
ಕರವಾ ಚೌತ್ನ ದಿನ, ವಿವಾಹಿತ ಮಹಿಳೆಯರು ಸೂರ್ಯೋದಯದಿಂದ
ಚಂದ್ರೋದಯದವರೆಗೆ ಉಪವಾಸವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಅವರು ಸೂರ್ಯೋದಯದಿಂದ ಚಂದ್ರನನ್ನು
ನೋಡುವ ಸಮಯದವರೆಗೆ ಯಾವುದೇ ಆಹಾರ ಅಥವಾ ನೀರನ್ನು ಸೇವಿಸುವುದಿಲ್ಲ. ಅವರು ಚಂದ್ರನನ್ನು ನೋಡಿ, ಅದಕ್ಕೆ
ಹರಕೆಗಳನ್ನು ಸಲ್ಲಿಸಿದ ನಂತರವೇ ಉಪವಾಸವನ್ನು ಅಂತ್ಯಗೊಳಿಸುತ್ತಾರೆ.
ಕರವಾ ಚೌತ್ ಎಂದರೆ ಪತಿ-ಪತ್ನಿಯರ ನಡುವಿನ
ಸುಂದರ ಬಾಂಧವ್ಯದ ಸಂಭ್ರಮ. ಕರವಾ ಚೌತ್ ದಿನದಂದು ಕಾರ್ತಿಕ ಮಾಸದ ಚತುರ್ಥಿಯ ದಿನ ಮಣ್ಣಿನ ಮಡಕೆಯನ್ನು
ಬಳಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದು ರೂಢಿಯಲ್ಲಿದೆ.