ದಕ್ಷಿಣಾಯನ ಪುಣ್ಯಕಾಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕ ರಾಶಿ ಅಥವಾ ಕರ್ಕ ರಾಶಿ ಸೂರ್ಯ ಪ್ರವೇಶಿಸುವ ದಿನ ದಕ್ಷಿಣಾಯಣ ಪುಣ್ಯಕಾಲ. ಇದನ್ನು ದಕ್ಷಿಣಾಯನ ಅಥವಾ ಕರ್ಕ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಇದು ದೇವರ ರಾತ್ರಿಯನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ, ಮಾನವ ವರ್ಷವು ದೇವತೆಗಳ ಒಂದು ದಿನಕ್ಕೆ ಸಮವಾಗಿರುತ್ತದೆ ಮತ್ತು ಉತ್ತರಾಯಣದ ನಂತರದ 6 ತಿಂಗಳುದೇವರ ರಾತ್ರಿ ಸಮಯವಾಗಿರುತ್ತದೆ.

ಸರಳವಾಗಿ ಹೇಳುವುದಾದರೆ, ದಕ್ಷಿಣಾಯಣ ಪುಣ್ಯಕಾಲವು ಸೂರ್ಯನ ದಕ್ಷಿಣ ಸಂಚಾರದ ಸಂಕೇತವಾಗಿದೆ. ದಕ್ಷಿಣಾಯನ ಕಾಲವು ಮಕರ ಸಂಕ್ರಾಂತಿ ಅಥವಾ ಉತ್ತರಾಯಣದಂದು ಕೊನೆಗೊಳ್ಳುತ್ತದೆ.

ಪುರಾಣ

ಪುರಾಣಗಳ ಪ್ರಕಾರ, ಈ ಕಾಲದಲ್ಲಿ ಭಗವಾನ್ ವಿಷ್ಣುವು ನಿದ್ರೆಗೆ ಜಾರುತ್ತಾನೆ. ಈ ಅವಧಿಯಲ್ಲಿ ಚಾತುರ್ಮಾಸ್ಯವನ್ನು ಸಹ ಆಚರಿಸಲಾಗುತ್ತದೆ.

ಕರ್ಕ ಸಂಕ್ರಾಂತಿ ದಿನವನ್ನು ಅನೇಕ ಹಿಂದೂಗಳು ಮೃತ ಸಂಬಂಧಿಗಳು ಮತ್ತು ಪೂರ್ವಜರಿಗೆ ಶ್ರಾದ್ಧ ಅಥವಾ ಪಿಂಡ ಪ್ರದಾನವನ್ನು ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ವಿಷ್ಣುವಿನ ಅವತಾರವಾದ ವರಾಹವನ್ನು ಈ ದಿನದಂದು ಪೂಜಿಸಲಾಗುತ್ತದೆ.