ನಂದೀಶ್ವರ ಅಷ್ಟಾಹ್ನಿಕ

ಜೈನ ಹಬ್ಬಗಳು ವರ್ಷದ ನಿಗದಿತ ದಿನಗಳಲ್ಲಿ ನಡೆಯುತ್ತವೆ. ಜೈನ ಹಬ್ಬಗಳು ತೀರ್ಥಂಕರರ ಜೀವನ ಘಟನೆಗಳಿಗೆ ಸಂಬಂಧಿಸಿವೆ ಅಥವಾ ಆತ್ಮಶುದ್ಧಿಯ ಉದ್ದೇಶದಿಂದ ಆಚರಿಸಲ್ಪಡಲಾಗುತ್ತದೆ.

‘ಅಷ್ಟ’ ಎಂಬ ಪದಕ್ಕೆ ‘ಎಂಟು’ ಮತ್ತು 'ಆಹ್ನಿಕ' ಎಂಬ ‘ನಿತ್ಯ’ ಅರ್ಥ ಇದೆ. ಆಷಾಢ ಮತ್ತು ಫಾಲ್ಗುಣ ಮಾಸಗಳಲ್ಲಿ ಈ ಉತ್ಸವವು ಬಂದಾಗ, ಈ ಆಚರಣೆಯನ್ನು ನಂದೀಶ್ವರ ಅಷ್ಟಾಹ್ನಿಕ ಎಂದು ಕರೆಯಲಾಗುತ್ತದೆ. ಈ ಆಚರಣೆಯಿಂದ ಆಧ್ಯಾತ್ಮಿಕ ಒಳನೋಟ ಹಾಗೂ ಜ್ಞಾನ ವೃದ್ಧಿ ಸಾಧ್ಯ ಎನ್ನುವರು. ಈ ಆಚರಣೆಯನ್ನು ಆಚರಿಸುವುದರಿಂದ ಭಕ್ತರ ಇಷ್ಟಾರ್ಥ ಗಳು ನೆರವೇರುತ್ತವೆ.

ಮನುಷ್ಯರು ನಂದೀಶ್ವರನ ಬಳಿ ಹೋಗಲು ಸಾಧ್ಯವಾಗದ ಕಾರಣ ಅವರು ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಾರೆ. ಜೈನರು ವಿಶೇಷ ಪೂಜೆ, ಸಿದ್ಧಚಕ್ರ ವಿಧಾನ, ನಂದೀಶ್ವರ ವಿಧಾನ ಮತ್ತು ಮಂಡಲ ವಿಧಾನ ಆಚರಿಸುತ್ತಾರೆ.