ಬೃಹಸ್ಪತಿ (ಸಂಸ್ಕೃತ; ಅಂದರೆ ಬೃಹಸ್ಪತಿ,
ಬ್ರಹ್ಮಾಂಡದ ವಿಶಾಲತೆಯ ಚೈತನ್ಯ). ಪ್ರಾಚೀನ ಸಾಹಿತ್ಯದಲ್ಲಿ ಬೃಹಸ್ಪತಿ ವೈದಿಕ ಯುಗದ ಋಷಿ. ಆದರೆ
ಕೆಲವು ಮಧ್ಯಯುಗದ ಗ್ರಂಥಗಳಲ್ಲಿ ಇವರು ದೇವತೆಗಳಿಗೆ ಉಪದೇಶ ನೀಡುವವರೆಂದು ಹೇಳಲಾಗಿದೆ. ಸೌರಮಂಡಲದ
ಅತಿ ದೊಡ್ಡ ಗ್ರಹವಾದ ಗುರುಗ್ರಹವನ್ನು ಸೂಚಿಸುತ್ತದೆ. ಅವರು ಭೀಷ್ಮನಿಗೆ ರಾಜನ ಕರ್ತವ್ಯಗಳನ್ನು ಬೋಧಿಸಿದರು.
ಅದನ್ನು ಅವನು ನಂತರ ವಿದುರನಿಗೆ ಬೋಧಿಸಿದನು.
ಋಷಿ
ಋಗ್ವೇದದಲ್ಲಿ ಬೃಹಸ್ಪತಿ ಮೊದಲ ಮಹಾಪ್ರಕಾಶದಿಂದ ಜನಿಸಿದ ಋಷಿ, ಕತ್ತಲೆಯನ್ನು ದೂರ ಮಾಡಿದವನು ಪ್ರಕಾಶಮಾನ ಮತ್ತು ಶುದ್ಧನಾಗಿ, ಮತ್ತು ವಿಶೇಷ ಬಿಲ್ಲನ್ನು ಹೊತ್ತಿದ್ದಾನೆ, ಮತ್ತು ಅದರ ದಾರವು ಧರ್ಮದ ಆಧಾರ ಆಗಿದೆ ಎಂದು ಉಲ್ಲೇಖಿಸುವುದೆಂದು ಅಭಿಪ್ರಾಯವಿದೆ. ಅವರ ಜ್ಞಾನ ಮತ್ತು ಚಾರಿತ್ರ್ಯವು ಪೂಜ್ಯವಾಗಿದೆ, ಮತ್ತು ಎಲ್ಲಾ ದೇವರಿಂದ ಅವರನ್ನು ಗುರು ಎಂದು ಪರಿಗಣಿಸಲಾಗುತ್ತದೆ.