ನಿಮಿಷಾಂಬ ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧ
ಶ್ರೀ ನಿಮಿಷಾಂಬ ದೇವಾಲಯವಿದೆ. ಶ್ರೀರಂಗಪಟ್ಟಣದ ಗಂಜಾಂ
ಗ್ರಾಮದಿಂದ ಸುಮಾರು 2.5 ಕಿ.ಮೀ. ದೂರದಲ್ಲಿ ಕಾವೇರಿ ನದಿ ಪಾತ್ರದಲ್ಲಿದೆ.
ಆಗಮೋಕ್ತ ಪದ್ಧತಿಯಂತೆ ಈಗಿರುವ ದೇವಾಲಯವನ್ನು
ನಿರ್ಮಿಸಲಾಗಿದೆ. ಇಲ್ಲಿ ಶ್ರೀ ನಿಮಿಷಾಂಬ ದೇವಿ, ಶ್ರೀಚಕ್ರ ಶ್ರೀ ಮುಕ್ತಿಕೇಶ್ವರ ಸ್ವಾಮಿ ಮತ್ತು
ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ಜೊತೆಗೆ ಸೂರ್ಯದೇವ, ಗಣಪತಿ ಮತ್ತು ಹನುಮನ ವಿಗ್ರಹಗಳನ್ನು ಕಾಣಬಹುದು.
1578 ರಿಂದ 1617ರ ಅವಧಿಯಲ್ಲಿ ಶ್ರೀರಂಗಪಟ್ಟಣವು ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಮೈಸೂರಿನ ರಾಜ ಒಡೆಯರ್ ಅವರು ಶ್ರೀ ನಿಮಿಷಾಂಬ ದೇವಿಯನ್ನು ಶ್ರೀಚಕ್ರದೊಂದಿಗೆ ಪ್ರತಿಷ್ಠಾಪಿಸಿ ಪುನರ್ ನಿರ್ಮಾಣ ಮಾಡಿದರು.