ವೇದವ್ಯಾಸ ಜಯಂತಿ

ವ್ಯಾಸ, ವೇದವ್ಯಾಸರು ಅಥವಾ ಕೃಷ್ಣ ದ್ವೈಪಾಯನ ಎಂದೂ ಕರೆಯಲ್ಪಡುವ ಇವರು ಮಹಾಭಾರತ ಮತ್ತು ಪುರಾಣಗಳ ಸಾಂಪ್ರದಾಯಿಕ ಲೇಖಕ ಮತ್ತು ವೇದಗಳ ಸಾಂಪ್ರದಾಯಿಕ ಸಂಕಲನಕಾರ.

ಆರಂಭಿಕ ಜೀವನ

ವ್ಯಾಸರು ಮೊದಲ ಬಾರಿಗೆ ಮಹಾಭಾರತದ ಸಂಕಲನಕಾರರಾಗಿ, ಮಹಾಭಾರತದ ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡರು. ಅವರು ದ್ವಾಪರಯುಗದಲ್ಲಿ ಬಂದ ವಿಷ್ಣು ದೇವರು, ಮೌಖಿಕ ಸಂಪ್ರದಾಯದಿಂದ ವೈದಿಕ ಜ್ಞಾನವನ್ನು ಲಿಖಿತ ರೂಪದಲ್ಲಿ ಲಭ್ಯವಾಗುವಂತೆ ಮಾಡಲು ಬಂದವರು ಎಂದೂ ಹೇಳಲಾಗುತ್ತದೆ. ಸತ್ಯವತಿಯ ಮಗ ಹಾಗೂ ವಿಷ್ಣು ಪುರಾಣದ ಕರ್ತೃ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಇವರು ಯಮುನಾ ನದಿಯ ದ್ವೀಪವೊಂದರಲ್ಲಿ ಜನಿಸಿದರು.

ವೇದವ್ಯಾಸ

ವ್ಯಾಸರು ಆದಿಮ ಏಕವೇದವನ್ನು ಭಾಗಗಳಾಗಿ ವಿಂಗಡಿಸಿದರು. ಸಾಂಪ್ರದಾಯಿಕವಾಗಿ ಒಟ್ಟು ನಾಲ್ಕು ವೇದಗಳೆಂದು ಅಭಿಪ್ರಾಯಪಡುತ್ತಾರೆ. ಆದ್ದರಿಂದ ವೇದದ ದಿವ್ಯ ಜ್ಞಾನವನ್ನು ಜನರಿಗೆ ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು. ವ್ಯಾಸ ಎಂಬ ಪದದ ಅರ್ಥ ವಿಭಜನೆ, ‘ಬೇರ್ಪಡುವ’ ಎಂದು.  ಹಿಂದೂ ಕಾಲಾನುಕ್ರಮಗಳಲ್ಲಿ ವ್ಯಾಸರು ಪಾತ್ರದ ಬಗ್ಗೆ ವಿಷ್ಣುಪುರಾಣದಲ್ಲಿ ವಿವರವಾಗಿ ವಿವರಿಸುತ್ತದೆ.

ವ್ಯಾಸರು ಮಹಾಭಾರತ ಮಹಾಕಾವ್ಯದ ಇತಿಹಾಸಕಾರರೆಂದು ಹೆಸರುವಾಸಿಯಾಗಿದ್ದು, ಮಹಾಭಾರತದಲ್ಲಿ ಪ್ರಮುಖ ಪಾತ್ರವೆಂದು ಪರಿಗಣಿಸಲ್ಪಟ್ಟಿದ್ದಾನೆ. ವ್ಯಾಸರು  ಗಣೇಶನಿಗೆ ಪಠ್ಯವನ್ನು ಬರೆಯಲು ಸಹಾಯ ಮಾಡುವಂತೆ ಗಣೇಶನನ್ನು ಕೇಳುತ್ತಾರೆ. ವ್ಯಾಸರು ಒಂದೂ ವಿರಾಮವಿಲ್ಲದೆ ಕಥೆಯನ್ನು ನಿರೂಪಿಸಿದರೆ ಮಾತ್ರ ತಾನು ಹಾಗೆ ಮಾಡುವುದಾಗಿ ಗಣೇಶನು ಒಂದು ಪೂರ್ವಷರತ್ತು ವಿಧಿಸುತ್ತಾನೆ. ವ್ಯಾಸರು ಗಣೇಶನು ಶ್ಲೋಕಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದನು. ಹೇಗೆ ವ್ಯಾಸರು ಇಡೀ ಮಹಾಭಾರತವನ್ನು ಮತ್ತು ಎಲ್ಲಾ ಉಪನಿಷತ್ತುಗಳನ್ನು ಹಾಗೂ 18 ಪುರಾಣಗಳನ್ನು ನಿರೂಪಿಸುತ್ತಿದ್ದರೋ, ಹಾಗೆಯೇ ಭಗವಾನ್ ಗಣೇಶನು ಬರೆದನು.

ಹಿಂದೂ ಸಂಪ್ರದಾಯಗಳಲ್ಲಿ ವ್ಯಾಸರನ್ನು ಪೂಜನೀಯವಾಗಿ ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶದ ಕಲ್ಪಿಯಲ್ಲಿ ಶ್ರೀ ವೇದವ್ಯಾಸರ ಜನ್ಮಸ್ಥಳದಲ್ಲಿ ಭವ್ಯವಾದ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಶ್ರೀ ಬಾಲ ವ್ಯಾಸ ಮಂದಿರ ಎಂದು ಕರೆಯಲಾಗುತ್ತದೆ.