ಅಬ್ಬೂರು
ಚನ್ನರಾಯ ಪಟ್ಟಣದಿಂದ ಆರು ಕಿಲೋ
ಮೀಟರ್ ದೂರ ಇರುವ ಚಿಕ್ಕ ಹಳ್ಳಿ. ಇಲ್ಲಿ ಕಣ್ವ ನದಿ ಹರಿಯುವುದರಿಂದ ಸಹಜ ಪ್ರಾಕೃತಿಕ
ಸೌಂದರ್ಯ ನೆಲೆಗೊಂಡಿದೆ. ಈ
ಊರಿಗೆ ಹೆಸರು ಬಂದದ್ದು ಬ್ರಹ್ಮಣ್ಯ ತೀರ್ಥರಿಂದ. ಅವರು
ವ್ಯಾಸರಾಜರ ಗುರುಗಳು. ವ್ಯಾಸರಾಜರು ಬನ್ನೂರಿನಲ್ಲಿ ಜನಿಸಿದವರು. ಅವರ ವಿದ್ಯಾಭ್ಯಾಸ ಇಲ್ಲಿ ನಡೆಯಿತು. ದಾಸ ಸಾಹಿತ್ಯ ರಚನೆಗೂ ಬ್ರಹ್ಮಣ್ಯ
ತೀರ್ಥರಿಂದಲೇ ಪ್ರೇರಣೆ ದೊರಕಿತು. ಮುಂದೆ ವಿಜಯನಗರದ
ಅರಸರ ಗುರುಗಳಾದ ವ್ಯಾಸರಾಜರು ಅಲ್ಲಿ ದಾಸಕೂಟವನ್ನು ಸ್ಥಾಪಿಸಿದರು. ಅದರಲ್ಲಿ ಪ್ರಮುಖರಾಗಿದ್ದ ಪುರಂದರ ದಾಸರು ಮತ್ತು ಕನಕ ದಾಸರು ಕೂಡ ಅಬ್ಬೂರಿಗೆ ಬಂದು
ಕೀರ್ತನೆಗಳನ್ನು ರಚಿಸಿದ್ದರು ಎನ್ನುವುದು ಪ್ರತೀತಿ. ಅಬ್ಬೂರು ಬ್ರಹ್ಮಣ್ಯ ತೀರ್ಥರು 1467ರಲ್ಲಿ ಸಜೀವವಾಗಿ ಬೃಂದಾವನಸ್ಥರಾದರು. ಅಲ್ಲಿಂದ ಮುಂದೆ ನಿರಂತರವಾಗಿ ಅವರ ಆರಾಧನೆ
ನಡೆಯುತ್ತಾ ಬಂದಿದೆ. ಮೂರು ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾಧನೆ ಎಂಬ ಹೆಸರಿನಲ್ಲಿ ನಡೆಯುವ ಆರಾಧನಾ ಮಹೋತ್ಸವಕ್ಕೆ ಕರ್ನಾಟಕ ಮಾತ್ರವಲ್ಲದೆ
ತಮಿಳು ನಾಡು, ಆಂದ್ರಪ್ರದೇಶ, ತೆಲಂಗಾಣದಿಂದ
ಕೂಡ ಸಾವಿರಾರು ಭಕ್ತರು ಬರುತ್ತಾರೆ. ಅಬ್ಬೂರಿನಲ್ಲಿ ಬ್ರಹ್ಮಣ್ಯ
ತೀರ್ಥರ ಮಾತ್ರವಲ್ಲದೆ ಇನ್ನೂ ಅನೇಕ ಯತಿಗಳ ಬೃಂದಾವನ ಇದೆ.
ಅಬ್ಬೂರಿನ
ಬ್ರಹ್ಮತೀರ್ಥವು ಶ್ರೀ ವ್ಯಾಸರಾಜರ ಆಶ್ರಮವಾಗಿತ್ತು. ಅವರು ಮಧ್ವ ಪರಂಪರೆಯ ಶ್ರೇಷ್ಠ ಯತಿಗಳ
ಪಟ್ಟಿಯಲ್ಲಿ ಸ್ಥಾನ ಪಡೆದವರು. ಆಚಾರ್ಯ
ಮಧ್ವರ ಪರಂಪರೆಯಲ್ಲಿ ಶ್ರೀ ಪದ್ಮನಾಭ ತೀರ್ಥರು, ನರಹರಿ ತೀರ್ಥರು, ಮಾಧವ ತೀರ್ಥರು, ಅಕ್ಷೋಭ್ಯ ತೀರ್ಥರು, ನಂತರ ಜಯತೀರ್ಥ, ವಿದ್ಯಾಧಿರಾಜ, ರಾಜೇಂದ್ರ ತೀರ್ಥರು, ಮತ್ತು ಪುರುಷೋತ್ತಮ ಅಗರದಿಂದ
ಆಶ್ರಮವನ್ನು ಪಡೆದವರು.
ಜೀವನ
ಬ್ರಹ್ಮಣ್ಯತೀರ್ಥ ಅಥವಾ ಬ್ರಹ್ಮತೀರ್ಥರ ಕಾಲ 1443 ರಿಂದ 1467. ಅಬ್ಬೂರಿನಲ್ಲಿ 8ನೇ ವಯಸ್ಸಿನಲ್ಲಿ ಜನಿಸಿದ ಅವರು, ಶ್ರೀ
ಪುರುಷೋತ್ತಮತೀರ್ಥರಿಗೆ ಸನ್ಯಾಸವನ್ನು ನೀಡುವ ಮೂಲಕ ಬ್ರಹ್ಮತೀರ್ಥ ಎಂದು ಪ್ರಸಿದ್ಧರಾಗಿದ್ದರು.