ವಿಶ್ವ ಅಸ್ತಮಾ ದಿನ

1993ರಲ್ಲಿ ಸ್ಥಾಪಿತವಾದ ‘ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ’ ಸಂಸ್ಥೆಯು 1998ರಲ್ಲಿ ಮೊದಲ ಬಾರಿಗೆ ‘ವಿಶ್ವ ಅಸ್ತಮಾ ದಿನ’ವನ್ನು ಆಚರಿಸಿತು. ಈ ಹಿಂದೆ 35 ದೇಶಗಳು ಈ ಜಾಗತಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು.

ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಸಲಹೆಗಳು

ಪ್ರತಿವರ್ಷ ಮೇ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನಆಚರಿಸಲಾಗುತ್ತದೆ. ಇದು ವಿಶ್ವದಲ್ಲಿ ಹೆಚ್ಚುತ್ತಿರುವ ಅಸ್ತಮಾವನ್ನು ನಿವಾರಿಸಲು ಸಂಶೋಧಕರು, ಔಷಧತಜ್ಞರು ಮತ್ತು ಇತರರಿಗೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸುವ ಒಂದು ಉಪಕ್ರಮವಾಗಿದೆ.

ಇದು ಶ್ವಾಸಕೋಶದ ಶ್ವಾಸನಾಳಗಳ ಉರಿಯೂತದ ಕಾಯಿಲೆಯಾಗಿದೆ. ಇದು ವೇರಿಯಬಲ್ ಮತ್ತು ಪುನರಾವರ್ತಿತ ರೋಗಲಕ್ಷಣಗಳು, ವ್ಯತಿರಿಕ್ತ ವಾಯುಚಲನೆಯಲ್ಲಿ ಅಡಚಣೆಗಳ ಲಕ್ಷಣವಾಗಿದೆ. ಇದು ಹೆಚ್ಚು ಲೋಳೆಯನ್ನು ಉಂಟುಮಾಡುತ್ತದೆ. ಶ್ವಾಸನಾಳ ಸಂಕುಚಿತವಾಗಿ ವಾಯುಮಾರ್ಗವನ್ನು ನಿರ್ಬಂಧಿಸುತ್ತದೆ. 

ಮಹತ್ವ

ಜಾಗತಿಕ ಅಸ್ತಮಾ ವರದಿ ಪ್ರಕಾರ ಈ ಕಾಯಿಲೆಯು ಜಾಗತಿಕವಾಗಿ ಪ್ರತಿದಿನ 1000 ಕ್ಕೂ ಹೆಚ್ಚು ಜನರನ್ನು ಸಾಯಿಸುತ್ತದೆ. ಪ್ರತಿ ವರ್ಷ ಸುಮಾರು 339 ಮಿಲಿಯನ್ ಜನರನ್ನು ಅಸ್ತಮಾ ಬಾಧಿಸುತ್ತದೆ. ಮಕ್ಕಳು ಸೇರಿದಂತೆ ಬಹುತೇಕ ಮಂದಿ ರೋಗ ಪತ್ತೆಯಾಗದ ಕಾರಣ ಚಿಕಿತ್ಸೆ ಪಡೆದು ನಂತರ ಸಾವಿಗೆ ಕಾರಣ ರಾಗುತ್ತಾರೆ. ಡಬ್ಲ್ಯೂ ಎಚ್ ಒ ಪ್ರಕಾರ, ಈ ದೀರ್ಘಕಾಲೀನ ಕಾಯಿಲೆಯು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೋಗವು ಹೆಚ್ಚು ಹೆಚ್ಚು ಸಾಮಾನ್ಯವಾಗುತ್ತಿದೆ ಮತ್ತು ಏರುತ್ತಿರುವ ಸಂಖ್ಯೆಗಳು ಜಗತ್ತಿನಾದ್ಯಂತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಕಷ್ಟು ಭಯವನ್ನುಂಟುಮಾಡುತ್ತಿದೆ.

ಶೀರ್ಷಿಕೆಗಳು

ಒಂದು ನಿರ್ದಿಷ್ಟ ಅಂಶದ ಮೇಲೆ ಕೇಂದ್ರೀಕರಿಸಿ ವರ್ಷಪೂರ್ತಿ ಅದರತ್ತ ಕೆಲಸ ಮಾಡಲು ಒಂದು ಶೀರ್ಷಿಕೆಯೊಂದಿಗೆ ಪ್ರತಿ ವರ್ಷ ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಕೆಲವು ಈ ಕೆಳಗಿನವುಗಳನ್ನು ಪಟ್ಟಿ ಮಾಡಲಾಗಿದೆ:

·         ಅಸ್ತಮಾದಿಂದ ಹೊರಬರಲು ಒಗ್ಗೂಡಿ

·         ಅಸ್ತಮಾವನ್ನು ಅರ್ಥಮಾಡಿಕೊಳ್ಳುವುದು

·         ನೀವು ನಿಮ್ಮ ಅಸ್ತಮಾವನ್ನು ನಿಯಂತ್ರಿಸಬಹುದು

·         ಅಲರ್ಜಿ ಮತ್ತು ಅಸ್ತಮಾ

·         ಉತ್ತಮ ಗಾಳಿ ಉತ್ತಮ ಉಸಿರಾಟ