ಅಗ್ನಿನಕ್ಷತ್ರ ದೋಷಾರಂಭ

ವಿಶೇಷವಾಗಿ ತಮಿಳುನಾಡಿನಲ್ಲಿ ಮುರುಗ ದೇವರಿಗೆ ಸಂಬಂಧಿಸಿದಂತೆ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಅಗ್ನಿನಕ್ಷತ್ರವೂ ಒಂದು. 14 (ಕೆಲವೆಡೆ 21) ದಿನಗಳ ಕಾಲ ಇದನ್ನು ಆಚರಿಸಲಾಗುತ್ತದೆ. ಮೇ ತಿಂಗಳಲ್ಲಿ ಅತ್ಯಂತ ಬಿಸಿಲಿನ ತೀವ್ರತೆಯಿದ್ದಾಗ ತಮಿಳುನಾಡಿನಲ್ಲಿ ಆಚರಿಸುವ ಏಕೈಕ ಸಂಪ್ರದಾಯ ಅಗ್ನಿ ನಕ್ಷತ್ರಕ್ಕೆ ಸಂಬಂಧಿಸಿದ್ದು. 14 ದಿನಗಳ ಕಾಲ ನಡೆಯುವ ಅಗ್ನಿ ನಕ್ಷತ್ರದ ಆಚರಣೆಯಲ್ಲಿ ಕೃತ್ತಿಕಾ ಎಂಬ ನಕ್ಷತ್ರವನ್ನು ಆಧಾರವಾಗಿರಿಸಿ ಸೂರ್ಯನ ಚಲನೆಯನ್ನು ಗುರುತಿಸಲಾಗುತ್ತದೆ. ಹಾಗೆಯೇ ಭರಣಿ ನಕ್ಷತ್ರದ 3ನೇ ಪಾದದಿಂದ ರೋಹಿಣಿ ನಕ್ಷತ್ರದ 3ನೇ ಪಾದದವರೆಗೆ ಅಗ್ನಿ ನಕ್ಷತ್ರದ ಅವಧಿಯನ್ನು ವ್ಯಾಖ್ಯಾನಿಸಲಾಗುತ್ತದೆ. ಅಗ್ನಿ ನಕ್ಷತ್ರದ ಉತ್ಸವವನ್ನು ಮುರುಗ ದೇವಾಲಯಗಳಲ್ಲಿ ಪೂರ್ಣ ವೈಭವದಿಂದ ಆಚರಿಸಲಾಗುತ್ತದೆ. ಈ ದಿನಗಲ್ಲಿ ವಿವಾಹ ಸಂಬಂಧಿತ ಕಾರ್ಯಗಳು ವರ್ಜ್ಯ. ಈ ಅವಧಿಯನ್ನು ವಿವಾಹ ಸಂಬಂಧಿತ ಕಾರ್ಯ ಕ್ಕೆ ದೋಷವಾಗಿ ಪರಿಗಣಿಸುತ್ತಾರೆ. ಈ ದೋಷವು ಇಂದಿನ ದಿನದಿಂದ ಪ್ರಾಪ್ತವಾಗುವುದೆಂಬ ನಂಬಿಕೆ ಇದೆ.