ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ

ಪ್ರಾಮುಖ್ಯತೆ

ಜನರಿಗೆ ಮಾಹಿತಿ ನೀಡಲು ಪತ್ರಿಕಾ ಸ್ವಾತಂತ್ರ್ಯ ಮುಖ್ಯ. ಸ್ವತಂತ್ರ ಪತ್ರಿಕಾ ಸಂಸ್ಥೆ ಆಡಳಿತದ ಮೇಲೆ ನಿಗಾ ಇಡುತ್ತದೆ ಮತ್ತು ದೇಶದ ಒಳಿತಿಗಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತದೆ.

ಪತ್ರಿಕೆಗಳು ಸರ್ಕಾರ ಮತ್ತು ಜನರ ನಡುವಿನ ಸಂವಹನ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಮುಕ್ತ ಪತ್ರಿಕೆಗಳು ಸತ್ಯವನ್ನು ವರದಿ ಮಾಡುವ ಮತ್ತು ಜನರ ಅಭಿಪ್ರಾಯಗಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ಹೊಂದಿದೆ. ಆದ್ದರಿಂದ ಪತ್ರಿಕಾ ಪ್ರಾಮುಖ್ಯತೆಯನ್ನು ಸೂಚಿಸುವ ಸಲುವಾಗಿ, ಪ್ರತಿ ವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ

ಯುನೆಸ್ಕೋದ ಜನರಲ್ ಕಾನ್ಫರೆನ್ಸ್ ನ ಶಿಫಾರಸಿನ ಮೇರೆಗೆ 1993ರ ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಘೋಷಿಸಲಾಯಿತು. ಅಂದಿನಿಂದ ಮೇ 3 ನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ತಮ್ಮ ಬದ್ಧತೆಯನ್ನು ಗೌರವಿಸಬೇಕಾದ ಅಗತ್ಯವನ್ನು ಸರ್ಕಾರಗಳಿಗೆ ನೆನಪಿಸುವಂತೆ ಕಾರ್ಯನಿರ್ವಹಿಸುತ್ತದೆ.

ಆಚರಣೆ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವು ‘ವಿಶ್ವ ಪತ್ರಿಕಾ ದಿನ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೇ 3 ರಂದು ವಾರ್ಷಿಕವಾಗಿ ಆಚರಿಸಲ್ಪಡುವ, ಸಂಘಟಿಸಲ್ಪಟ್ಟಿರುವ ಮತ್ತು ಉತ್ತೇಜಿಸಲ್ಪಡುವ ಕ್ಯಾಲೆಂಡರ್ ಘಟನೆಗಳಲ್ಲಿ ಒಂದಾಗಿದೆ. ಪತ್ರಿಕಾ ಸ್ವಾತಂತ್ರ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ವೃತ್ತಿನೀತಿಗಳ ಬಗ್ಗೆ ಮಾಧ್ಯಮ ವೃತ್ತಿಪರರಲ್ಲಿ ಅರಿವು ಮೂಡಿಸುತ್ತದೆ.

ಮೇ 3, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವು ಮಾಧ್ಯಮವನ್ನು ಬೆಂಬಲಿಸಲ್ಪಡುವ ದಿನವಾಗಿದೆ. ಒಂದು ಕಥೆಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರನ್ನು ಸ್ಮರಿಸುವ ದಿನವೂ ಹೌದು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಶೀರ್ಷಿಕೆಗಳಲ್ಲಿ ಒಂದಾದ 'ಜರ್ನಲಿಸಂ ವಿತ್ ಫಿಯರ್ ಅಥವಾ ಫೇವರ್' ಎಂದು ಹೇಳುತ್ತದೆ.