ವಿಶ್ವ ಜನಸಂಖ್ಯಾ ದಿನ

ಮಹತ್ವ

ವಿಶ್ವ ಜನಸಂಖ್ಯಾ ದಿನವು ಪ್ರತಿ ವರ್ಷ ಜುಲೈ 11 ರಂದು ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲ್ಪಡಲಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ಜನಸಂಖ್ಯೆಯಲ್ಲಿ ತೀವ್ರ ವಾದ ಏರಿಕೆ ಕಂಡುಬಂದಿದೆ ಮತ್ತು ನಿರಂತರ ಜನಸಂಖ್ಯಾ ಬೆಳವಣಿಗೆಯು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗೆ ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ, ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳು ಸೇರಿದಂತೆ ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಲು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಪ್ರಕಾರ 2011ರಲ್ಲಿ ಜಾಗತಿಕ ಜನಸಂಖ್ಯೆ 7 ಶತಕೋಟಿಗೆ ತಲುಪಿದೆ. ಇಂದು ಅದು 8 ಶತಕೋಟಿ ಸಮೀಪದಲ್ಲಿದೆ. 2030ರಲ್ಲಿ ಅದು 8.5 ಶತಕೋಟಿ, 2050ರಲ್ಲಿ 9.7 ಶತಕೋಟಿ ಮತ್ತು 2100ರಲ್ಲಿ 10.9 ಶತಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

ವಿಶ್ವ ಜನಸಂಖ್ಯಾ ದಿನವು ಪ್ರತಿ ವರ್ಷ ಜುಲೈ 11 ರಂದು ಆಚರಿಸಲ್ಪಲಾಗುತ್ತದೆ. ಇದು ಅತಿ ಜನಸಂಖ್ಯಾ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಪರಿಸರ ಮತ್ತು ಅಭಿವೃದ್ಧಿಯ ಮೇಲೆ ಅತಿಯಾದ ಜನಸಂಖ್ಯೆಯ ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಉಂಟುಮಾಡುತ್ತದೆ.

ಇತಿಹಾಸ

1989ರ ಜುಲೈ 11ರಂದು ಮೊದಲ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.