ರೇಣುಕಾಂಬ ದೇವಾಲಯ
ಚಂದ್ರಗುತ್ತಿಯು ಸಹ್ಯಾದ್ರಿ ಪರ್ವತ ಶ್ರೇಣಿಯ ಬಂಡೆಗಳ ಮೇಲೆ ನೆಲೆಸಿರುವ ಒಂದು ಸುಂದರ ತಾಣವಾಗಿದ್ದು ಸೊರಬದಿಂದ 18 ಕಿ.ಮೀ ದೂರದಲ್ಲಿದೆ. ಚಂದ್ರಗುತ್ತಿ ಪರಶುರಾಮನ ತಾಯಿ ರೇಣುಕಾಂಬ ದೇವಿಗೆ ಮುಡಿಪಾದ ದೇವಾಲಯ ಎಂಬ ಖ್ಯಾತಿ ಪಡೆದಿದೆ. ಚಂದ್ರಗುತ್ತಿ ಒಂದು ಪುಣ್ಯ ಕ್ಷೇತ್ರವಾಗಿದ್ದು, ಪ್ರತಿವರ್ಷ ಸಾವಿರಾರು ಜನರು ಭೇಟಿ ನೀಡಿ ಬರುತ್ತಾರೆ. ಇಲ್ಲಿಗೆ ಭೇಟಿ ನೀಡುವವರು ಚಂದ್ರಗುತ್ತಿಯಿಂದ 3 ಕಿ.ಮೀ ದೂರದಲ್ಲಿರುವ ವರದಾ ನದಿಯಲ್ಲಿ ಸ್ನಾನ ಮಾಡಿ ಬೆಟ್ಟಹತ್ತಿ ಬೆಟ್ಟವನ್ನು ತಲುಪುತ್ತಾರೆ.
ಈ ದೇವಾಲಯಕ್ಕೆ ಭೇಟಿ ನೀಡುವ ಮೊದಲು ನಾಗಪಂಥಕ್ಕೆ ಸೇರಿದ ಒಂದು ಮಠ, ನಂತರ ಕಾಲಭೈರವನಿಗೆ ಮುಡಿಪಾದ ಒಂದು ಚಿಕ್ಕ ಗುಡಿಯನ್ನು ಕಾಣಬಹುದು. ಒಳಗೆ ಒಂದು ಗುಹೆ ಇದೆ, ಅಲ್ಲಿ ರೇಣುಕಾಂಬ ದೇವಿಯ ಸುಂದರ ವಿಗ್ರಹವಿದೆ. ರೇಣುಕಾಂಬ ದೇವಾಲಯದ ಮುಂದೆ ಏಳು ಹೆಡೆ ನಾಗ ಮತ್ತು ಪರಶುರಾಮರಿರುವ ಸರ್ಪಕ್ಕೆ ಸಮರ್ಪಿತವಾದ ಒಂದು ಸಣ್ಣ ಗುಡಿಯನ್ನು ಕಾಣಬಹುದು. ಮಾತಂಗಿಯ ವಿಗ್ರಹವು ದೇವಾಲಯದ ಪಕ್ಕದಲ್ಲಿದೆ.