ವಿಶ್ವ ಕ್ಯಾನ್ಸರ್ ದಿನ

ಕ್ಯಾನ್ಸರ್, ಇದನ್ನು ‘ಅರ್ಬುದ ರೋಗ’ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ), ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ). ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸುತ್ತದೆ. (ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು, ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ.

ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೆ ಗಂಡಾಂತರಕಾರಿ ರೋಗವೆನಿಸಿದೆ. ಇದು ವಯಸ್ಸು ಹೆಚ್ಚಾದಂತೆ ಕಾಡುವ ಕಾಯಿಲೆಯಾಗಿದೆ. ವಿಶ್ವಾದ್ಯಂತ 2007ರಲ್ಲಿ ಒಟ್ಟು ಮಾನವ ಸಾವಿನಲ್ಲಿ 13%ರಷ್ಟು ಕ್ಯಾನ್ಸರ್ ನಿಂದ ಉಂಟಾಗಿವೆ. ವಂಶವಾಹಿನಿಯಲ್ಲಿನ ಅಂಗಾಂಶ ಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯನ್ನು ತೋರಿಸುತ್ತವೆ. ಕ್ಯಾನ್ಸರ್ ರೋಗಕ್ಕೆ ಇದುಕಾರಣವಾಗಿದೆ. ಇಂತಹ ಅಸ್ವಾಭಾವಿಕ ವೈಪರಿತ್ಯಗಳು ಕ್ಯಾನ್ಸರ್ ಕಾರಕವೆನಿಸಿವೆ.

ನಿಯಂತ್ರಣ

ಕ್ಯಾನ್ಸರ್ ನಿರ್ಮೂಲನೆಯ ವ್ಯಾಖ್ಯಾನವು ಕ್ಯಾನ್ಸರ್ ಆಗುವಿಕೆಯನ್ನು ತಡೆಗಟ್ಟುವದೇ ಆಗಿದೆ. ಬಹಳಷ್ಟು ಕ್ಯಾನ್ಸರ್ ಪಿಡುಗನ್ನು ತಪ್ಪಿಸಬಹುದಾಗಿದೆ. ಇದರಲ್ಲಿ ಅಪಾಯಕಾರಿಯಾಗಿರುವ ಸಂಭವನೀಯ ಕಾರಣಗಳಾದ ತಂಬಾಕು, ಅತಿಯಾದ ತೂಕ, ಅಥವಾ ಅಧಿಕ ಕೊಬ್ಬಿನಾಂಶ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ವ್ಯಾಯಾಮದ ಕೊರತೆ, ಮದ್ಯಪಾನ, ಲೈಂಗಿಕ ಸೋಂಕಿನ ಕಾಯಿಲೆ, ವಾಯು ಮಾಲಿನ್ಯ ಇವುಗಳಿಂದ ದೂರವಿದ್ದಷ್ಟು ಇದನ್ನು ತಡೆಗಟ್ಟಬಹುದು. ಇದರಿಂದ ಕಾರ್ಸಿನೊಜಿನ್ ಗಳನ್ನು ದೂರ ಇಡಬಹುದು ಇಲ್ಲವೆ ಕೋಶಗಳಲ್ಲಿನ ಕ್ಯಾನ್ಸರ್ ಮಾರ್ಪಾಡಿನ ಬದಲಾವಣೆಯನ್ನು ಹಾನಿಕಾರವಾಗದಂತೆ ನಿರ್ಭಂದಿಸಬಹುದು. ಇದಕ್ಕಾಗಿ ಜೀವನಶೈಲಿ ಬದಲಾವಣೆ ಅಥವಾ ಆಹಾರ ಪದ್ಧತಿ ಕ್ಯಾನ್ಸರ್ ಕಾರಕಗಳನ್ನು ದೂರ ಇಡಬಹುದಲ್ಲದೇ ವೈದ್ಯಕೀಯ ಸೌಕರ್ಯಗಳ ಸಕಾಲಿಕ ಬಳಕೆಯಿಂದ ಈ ಮಾರಕ ಕಾಯಿಲೆಯನ್ನು ತಡೆಯಬಹುದು. ಪ್ರಾಥಮಿಕ ಚಿಕಿತ್ಸೆ ಪರಿಕಲ್ಪನೆಯು ಇದರ ಪ್ರಥಮ ನಿರ್ಮೂಲನಾ ಕ್ರಮವಾಗಿದೆ.

ಫೆಬ್ರುವರಿ ೪ ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಜನರಿಗೆ ಜನಜಾಗೃತಿ ಮೂಡಿಸುವುದು ಈ ದಿನದ ಮಹತ್ವವಾಗಿದೆ. ಒಟ್ಟಿನಲ್ಲಿ ವೈದ್ಯರ ಬಳಿ ಪರೀಕ್ಷೆ ನಡೆಸಿದರೆ ಉತ್ತಮ.

ಈ ಪ್ರಮುಖ ಲಕ್ಷಣಗಳು ಕಂಡು ಬಂದರೆ ಎಚ್ಚರದಿಂದಿರಿ:

§  ವಸಡುಗಳಿಂದ ರಕ್ತ: ಕೆಟ್ಟ ಹೈಜಿನ್‌ನಿಂದಾಗಿ ವಸಡುಗಳಿಂದ ರಕ್ತ ಸೋರುವುದು ಸಹ ಕ್ಯಾನ್ಸರ್‌ನ ಲಕ್ಷಣವಾಗಿದೆ. ಇದನ್ನು ಲ್ಯುಕೆಮಿಯ ಎಂದು ಕರೆಯುತ್ತಾರೆ. ಇದು ಒಂದು ವಿಧವಾದ ಬ್ಲಡ್‌ ಕ್ಯಾನ್ಸರ್‌ ಆಗಿದೆ.

§  ಉಗುರಿನ ಕೆಳಗೆ ಕಪ್ಪು ಲೈನ್‌: ಉಗುರಿನ ಕೆಳಗೆ ಕಪ್ಪು ಗೆರೆ ಕಂಡು ಬಂದರೆ ಅದಕ್ಕೆ ಮೆಲನೋಮಾ ಎಂದು ಹೆಸರು. ಇದು ಸ್ಕಿನ್‌ ಕ್ಯಾನ್ಸರ್‌ನ ಲಕ್ಷಣವಾಗಿದೆ.

§  ಗಂಟಲಿನಲ್ಲಿ ನುಂಗಲು ತೊಂದರೆ: ಆಹಾರ ಸೇವಿಸುವಾಗ ನುಂಗಲು ಕಷ್ಟವಾದರೆ, ಕುಡಿಯಲು ಕಷ್ಟವಾದರೆ, ಜೊತೆಗೆ ನಿಮ್ಮ ತೂಕ ಕಡಿಮೆಯಾದರೆ, ವಾಂತಿ ಸಮಸ್ಯೆ ಕಂಡುಬಂದರೆ ಗಂಟಲಿನ ಕ್ಯಾನ್ಸರ್‌ನ ಲಕ್ಷಣವಾಗಿದೆ.

§  ಮೂತ್ರ ವಿಸರ್ಜನೆಗೆ ತೊಂದರೆ: ಆಗಾಗ ಬಾತ್‌ರೂಮ್‌ಗೆ ಹೋಗಬೇಕೆನಿಸುವುದು, ಮೂತ್ರ ವಿಸರ್ಜಿಸಲು ತೊಂದರೆಯಾಗುವುದು, ಯೂರಿನ್‌ ಲೀಕ್‌ ಆಗುವುದು, ಮೂತ್ರವನ್ನು ತಡೆಯಲು ಸಾಧ್ಯವಾಗದಿರುವುದು ಅಥವಾ ಡಾರ್ಕ್‌ ಬಣ್ಣದಲ್ಲಿ ಮೂತ್ರ ಕಾಣಿಸಿಕೊಳ್ಳುವುದು.

§  ಮೂತ್ರದಲ್ಲಿ ರಕ್ತ: ಮೂತ್ರ ವಿಸರ್ಜನೆ ಸಂದರ್ಭ ರಕ್ತ ಬರುವುದು ಕಿಡ್ನಿ ಕ್ಯಾನ್ಸರ್‌ನ ಲಕ್ಷಣ. ಕೆಲವೊಮ್ಮೆ ಯೂರಿನ್‌ ಇನ್‌ಫೆಕ್ಷನ್‌ನಿಂದಾಗಿಯೂ ಮೂತ್ರವಿಸರ್ಜನೆ ಸಂದರ್ಭ ದಲ್ಲಿ ರಕ್ತ ಬರುತ್ತದೆ.

§  ಕುತ್ತಿಗೆಯ ಮೇಲೆ ಊತ : ಊತ ಮೂಡಲು ಕಾರಣ ಕೆಲವೊಮ್ಮೆ ಗ್ರಂಥಿಯೂ ಆಗಿರುತ್ತದೆ. ಈ ಸಮಸ್ಯೆ ಕಂಡು ಬಂದರೆ ಬೇಗನೆ ನಿವಾರಣೆ ಕೂಡ ಆಗುತ್ತದೆ. ಇದು ಕ್ಯಾನ್ಸರ್‌ನ ಲಕ್ಷಣವಾಗಿದೆ.

§  ಹೊಟ್ಟೆ ನೋವು: ಕೆಲವೊಂದು ಆಹಾರ ತಿಂದರೆ ವಿಪರೀತ ಹೊಟ್ಟೆ ನೋವಾಗುವುದು. ಕೆಲವೊಮ್ಮೆ ಮಲ ವಿಸರ್ಜನೆ ಮಾಡುವಾಗ ರಕ್ತ ಬರುವುದು ಇದು ಸಹ ಕ್ಯಾನ್ಸರ್ ನ ಲಕ್ಷಣವಾಗಿದೆ.