ಕಾಲಾಷ್ಟಮಿ ದಿನವನ್ನು ಸಾಮಾನ್ಯವಾಗಿ ‘ಅಹೋಯಿ ಅಷ್ಟಮಿ’ ಎಂದು ಕರೆಯಲಾಗುತ್ತದೆ. ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಮತ್ತು ಮಗುವಿನ ಶಾಂತಿ - ಸಂತೋಷದ ಜೀವನಕ್ಕಾಗಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಮಕ್ಕಳಿಲ್ಲದ ಮಹಿಳೆಯರು ಈ ದಿನ ಮಕ್ಕಳನ್ನು ಪಡೆಯಲು ಕಾಲಾಷ್ಟಮಿ ಅಥವಾ ಅಹೋಯಿ ಅಷ್ಟಮಿಯಂದು ಉಪವಾಸವನ್ನು ಆಚರಿಸುತ್ತಾರೆ. ಈ ದಿನ, ಪಾರ್ವತಿ ದೇವಿಯನ್ನು ಅಹೋಯಿ ಎಂದು ಪೂಜಿಸಲಾಗುತ್ತದೆ ಮತ್ತು ಈ ಉಪವಾಸವನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮಕ್ಕಳು ತಮ್ಮ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ.
ಮಕ್ಕಳ ಸಂತೋಷವನ್ನು ಸಾಧಿಸಲು ಕಾಲಾಷ್ಟಮಿ ದಿನದಂದು ಪಾರ್ವತಿ ಮಾತಾಳನ್ನು ಪೂಜಿಸಿದ ನಂತರ, ಶಿವ ಮತ್ತು ತಾಯಿ ಪಾರ್ವತಿಗೆ ಹಾಲು ಮತ್ತು ಅನ್ನವನ್ನು ಭೋಗವನ್ನಾಗಿ ಅರ್ಪಿಸಿ. ಆ ದಿನ ಮಾಡಿದ ಅರ್ಧದಷ್ಟು ಆಹಾರವನ್ನು ಹಸುಗಳಿಗೆ ಆಹಾರವಾಗಿ ನೀಡಬೇಕು. ನಂತರ ಸಂಜೆ, ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ ಅದನ್ನು ಸುತ್ತಬೇಕು.
ಕಾಲಾಷ್ಟಮಿಯ ದಿನದಂದು ಪಾರ್ವತಿ ದೇವಿಯನ್ನು ಪೂಜಿಸುವ ಸಮಯದಲ್ಲಿ, ತಾಯಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ ಮತ್ತು ಸಂತಾನ ಭಾಗ್ಯವನ್ನು ನೀಡುವಂತೆ ಪ್ರಾರ್ಥಿಸಿ. ಅಲ್ಲದೆ, ಮನೆಯಲ್ಲಿರುವ ಎಲ್ಲಾ ಸದಸ್ಯರ ಪಾದವನ್ನು ಸ್ಪರ್ಷಿಸಿ ಅವರಿಂದ ಆಶೀರ್ವಾದವನ್ನು ಪಡೆದುಕೊಂಡು ಮೆಯಲ್ಲಿ ತುಳಸಿ ಗಿಡವನ್ನು ನೆಡಬೇಕು.
ಕಾಲಾಷ್ಟಮಿಯ ದಿನದಿಂದ 45 ದಿನಗಳವರೆಗೆ ನಿರಂತರವಾಗಿ ಗಣಪತಿ ವಿಗ್ರಹದ ಮೇಲೆ ಬಿಲ್ವ ಪತ್ರೆಯನ್ನು ಅರ್ಪಿಸಿ ಮತ್ತು ಪ್ರತಿದಿನ 'ಓಂ ಪಾರ್ವತಿ ಪ್ರಿಯ ನಂದನಾಯ ನಮಃ' ಎಂಬ ಮಂತ್ರವನ್ನು 11 ಮಣಿಯ ಮಾಲೆಯನ್ನು ಹಿಡಿದು ಪಠಿಸಬೇಕು.
ಕಾಲಾಷ್ಟಮಿಯ ಮಹತ್ವ
ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು
ಅತ್ಯಂತ ಸಡಗರ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ.
ಕಾಲಾಷ್ಟಮಿಯನ್ನು
ಪ್ರತಿ ಚಾಂದ್ರಮಾಸದಲ್ಲಿ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು (ಚಂದ್ರನ ಕ್ಷೀಣತೆಯ ಅವಧಿಯ 8ನೇ
ದಿನ) ಆಚರಿಸಲಾಗುತ್ತದೆ. ಈ ದಿನವನ್ನು ಭೈರವನಿಗೆ ಸಮರ್ಪಿಸಲಾಗಿದೆ. ಇದು ಭಗವಾನ್ ಶಿವನ ಕೋಪದ
ಅಭಿವ್ಯಕ್ತಿಯಾಗಿದೆ ಎಂದು ಹೇಳಲಾಗುತ್ತದೆ.
ಅಷ್ಟಮಿ
ತಿಥಿ ಪೂರ್ಣಿಮಾ ನಂತರ (ಅಂದರೆ ವರ್ಷದಲ್ಲಿ ಒಟ್ಟು 12 ಬಾರಿ) ಭೈರವನ ಆರಾಧನೆಗೆ ಉತ್ತಮ
ದಿನವೆಂದು ಪರಿಗಣಿಸಲಾಗಿದೆ. ಭೈರವನನ್ನು ಅನುಸರಿಸುವ ಭಕ್ತರು ಈ ದಿನಗಳಲ್ಲಿ ಪೂಜೆ ಮತ್ತು
ಉಪವಾಸವನ್ನು ಮಾಡುತ್ತಾರೆ.
ಪುರಾಣ
ಭೈರವ,
ಶಿವನ ಕೋಪದ ಅಭಿವ್ಯಕ್ತಿ ಎಂದು ನಂಬಲಾಗಿದೆ. ತ್ರಿಮೂರ್ತಿ ದೇವತೆಗಳಾದ ಬ್ರಹ್ಮ, ವಿಷ್ಣು ಮತ್ತು
ಶಿವ ಯಾರು ಶ್ರೇಷ್ಠರು ಎಂದು ಒಮ್ಮೆ ಚರ್ಚೆ ಯಾಗುವುದು. ದಂತಕಥೆಯ ಪ್ರಕಾರ ಬ್ರಹ್ಮನು ಶಿವನನ್ನು
ಅವಮಾನಿಸಿದಾಗ, ಭೈರವನು ಶಿವನ ಹಣೆಯಿಂದ ಪ್ರತ್ಯಕ್ಷನಾಗಿ ತನ್ನ ಐದು ತಲೆಗಳಲ್ಲಿ ಒಂದನ್ನು
ಕತ್ತರಿಸಿದನು. ಬ್ರಹ್ಮನ ತಲೆಯನ್ನು ಭೈರವನ ಎಡಹಸ್ತಕ್ಕೆ ಕಟ್ಟಿದನು. ತಾನು ಮಾಡಿದ ಘೋರ ಪಾಪದ
ಕಾರಣದಿಂದಾಗಿಯೇ ಬ್ರಹ್ಮನು ಭೈರವನ ಎಡಹಸ್ತದಲ್ಲಿ ಬಂಧಿಯಾಗಿದ್ದನೆಂದು ಎಂದು ಹೇಳಲಾಗುತ್ತದೆ.
ಭೈರವನೂ
ಕೂಡ ತಾನು ಮಾಡಿದ ಪಾಪ ಪ್ರಾಯಶ್ಚಿತ್ತಕ್ಕೆ ಪ್ರತಿಜ್ಞೆಯನ್ನು ಕೈಗೊಂಡು. ಬ್ರಹ್ಮನ
ತಲೆಬುರುಡೆಯನ್ನು ತನ್ನ ಭಿಕ್ಷಾಪಾತ್ರೆಯಂತೆ ಇಟ್ಟುಕೊಂಡು ಲೋಕದಲ್ಲಿ ಅಲೆದಾಡಬೇಕಾಯಿತು. ಪವಿತ್ರ
ನಗರವಾದ ವಾರಣಾಸಿಯನ್ನು ತಲುಪಿದಾಗ ಆತನು ಪಾಪಗಳಿಂದ ಮುಕ್ತನಾದನು ಎಂದು ಹೇಳಲಾಗುತ್ತದೆ.
ಆಚರಣೆ
ಭಕ್ತರು ಯಶಸ್ಸು, ಸಂಪತ್ತು, ಆರೋಗ್ಯ ಮತ್ತು
ಅಡೆತಡೆಗಳನ್ನು ನಿವಾರಣೆಗಾಗಿ ಭೈರವನನ್ನು ಆರಾಧಿಸುತ್ತಾರೆ. ಭೈರವಾಷ್ಟಮಿಯನ್ನು ಆಚರಿಸುವುದರಿಂದ
ತಮ್ಮ ಪಾಪಗಳು ನಾಶವಾಗುತ್ತದೆ ಮತ್ತು ಸಾವಿನ ಭಯದಿಂದ ಮುಕ್ತರಾಗುವರು ಎಂದು ಜನರು ನಂಬುತ್ತಾರೆ.
ಕಾಲಾಷ್ಟಮಿಯ
ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ನಂತರ ಕಾಲಭೈರವನಿಗಾಗಿ ವಿಶೇಷ ಪೂಜೆ ಸಲ್ಲಿಸಿ,
ಆಶೀರ್ವಾದ ಪಡೆದು, ಕ್ಷಮೆ ಕೇಳುತ್ತಾರೆ. ಇದಲ್ಲದೆ, ಭಕ್ತರು ಸಂಜೆಯೂ ಕಾಲಭೈರವನ
ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ಅವರು ಇಡೀ ದಿನ
ಉಪವಾಸವನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ. ಶ್ರದ್ಧಾಳುಗಳು ಭೈರವ, ಶಿವ ಮತ್ತು ಪಾರ್ವತಿಯರ
ಪ್ರಾರ್ಥನೆ, ಪೂಜೆ ಮತ್ತು ಕಥೆಗಳ ಮೂಲಕ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಭೈರವ ಕಪ್ಪು
ನಾಯಿಯೊಂದನ್ನು ತನ್ನ ವಾಹನವನ್ನಾಗಿ ಬಳಸುತ್ತಿದ್ದನೆಂದು ನಂಬಲಾದ
ಕಾರಣ ನಾಯಿಗಳಿಗೆ ಆಹಾರ ನೀಡುವ ಸಂಪ್ರದಾಯವನ್ನು ಅವರು ಅನುಸರಿಸುತ್ತಾರೆ.
ದೇಶದ
ವಿವಿಧ ಭಾಗಗಳಲ್ಲಿ ಕಲಶೋತ್ಸವವನ್ನು ಅತ್ಯಂತ ಸಡಗರ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ.