ನಂದೀಶ್ವರ ಅಷ್ಟಾಹ್ನಿಕ ಪರ್ವ

ಭಾರತ ದೇಶದಲ್ಲಿ ಜೈನ ಧರ್ಮವು ಪುರಾತನ ಧರ್ಮವಾಗಿದೆ. ಜೈನ ಧರ್ಮಕ್ಕೆ ತನ್ನದೇ ಆದ ಐತಿಹ್ಯವಿದ್ದು ಜೈನ ಪರಂಪರೆಯಲ್ಲಿ ಶಾಸ್ತ್ರದಾನಕ್ಕೆ ಮಹತ್ತರವಾದ ಸ್ಥಾನವಿದೆ. ಜೈನಧರ್ಮವನ್ನು ಪಾಲಿಸುವವರನ್ನು ಶ್ರಾವಕರು ಎಂದು ಕರೆಯಲಾಗುತ್ತದೆ. ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯವನ್ನು ಪಾಲಿಸಬೇಕಾದರೆ ಮೊದಲಾಗಿ ಶಾಸ್ತ್ರದ ಅರಿವು ಶ್ರಾವಕರಿಗಿರಬೇಕಾಗುತ್ತದೆ.

ಜೈನ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ. ಹಬ್ಬಗಳ ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಇರಬಹುದು. ಆದರೆ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆ ಇಲ್ಲ. 

ಪ್ರತಿವರ್ಷದ ಆಷಾಢ, ಕಾರ್ತಿಕ, ಫಾಲ್ಗುಣ ಮಾಸಗಳ ಶುಕ್ಲ ಪಕ್ಷದ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಅಷ್ಟಾಹ್ನಿಕ ಪರ್ವವನ್ನು ಅಚರಿಸಲಾಗುತ್ತದೆ. ಎಂಟೂ ದಿನಗಳಲ್ಲಿ ಇಂದ್ರಾದಿ ದೇವತೆಗಳು ಅಷ್ಟಮ ನಂದೀಶ್ವರ ದ್ವೀಪಗಳಿಗೆ ತೆರಳಿ ಅಲ್ಲಿಯ ಜಿನೇಶ್ವರರ ಪ್ರತಿಮೆಗಳನ್ನು  ಮಹಾವೈಭವದಿಂದ ಪೂಜಿಸುತ್ತಾರೆ. ನಂಬಿಕೆಯಂತೆ ಜೈನರು ಜಿನಮಂದಿರಗಳಲ್ಲಿರುವ ನಂದೀಶ್ವರ ಪರ್ವತದ ಪ್ರತಿಮೆಗಳನ್ನು ಮಹಾವೈಭವದಿಂದ ಪೂಜಿಸುತ್ತಾರೆ. ನಂಬಿಕೆಯಂತೆ ಜೈನರು ಜಿನಮಂದಿರಗಳಲ್ಲಿರುವ ನಂದೀಶ್ವರ ಪರ್ವತದ ಪ್ರತಿಮೆಯನ್ನು ಪೂಜಿಸಿ ಪುನೀತರಾಗುತ್ತಾರೆ.

ನಂದೀಶ್ವರ ದ್ವೀಪದ ರಚನೆಯು ಹೀಗಿದೆ: ದ್ವೀಪದ ನಾಲ್ಕೂ ದಿಕ್ಕಿನಲ್ಲಿ ಒಂದು ಅಂಜನಗಿರಿ, ನಾಲ್ಕೂ ದಧಿಮುಖ, ಎಂಟು ತಿರಕ ಹೀಗೆ ಹದಿಮೂರಂತೆ ಒಟ್ಟೂ ಐವತ್ತೆರಡು ಪರ್ವತಗಳಿರುತ್ತವೆ. ಅದರಲ್ಲಿ ಒಂದೊಂದರಂತೆ ಚೈತ್ಯಾಲಯಗಳಿದ್ದು ಅವುಗಳಲ್ಲಿ ನವರತ್ನ ಖಚಿತವಾದ ನೂರ ಎಂಟು ಜಿನಬಿಂಬಗಳಿರುತ್ತವೆ.