ಕೂಷ್ಮಾಂಡ ಎನ್ನುವುದು ದುರ್ಗಾ ಮಾತೆಯ ನಾಲ್ಕನೆಯ ಪೂಜಾ ವಿಧಿ, ಈ ಅವತಾರದಲ್ಲಿ ಅವಳು ಕೂಷ್ಮಾಂಡ ದೇವಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅಷ್ಟ ಭುಜೆ ಎಂದು ಕರೆಸಿಕೊಳ್ಳುವ ಅವಳು ಎಂಟು ತೋಳುಗಳನ್ನು ಉಳ್ಳವಳಾಗಿದ್ದು ಹುಲಿಯ ಮೇಲೆ ಕುಳಿತು ಕೊಂಡು ಇರುತ್ತಾಳೆ. ಈ ರೂಪದಲ್ಲಿ ತ್ರಿಮೂರ್ತಿಗಳೂ ಕೂಡ ಅವಳಲ್ಲಿ ನೆಲೆಗೊಂಡಿರುತ್ತಾಳೆ ಎನ್ನುವುದು ನಂಬಿಕೆ. ಭಕ್ತರು ಈ ಪೂಜೆಯ ಮೂಲಕ ತಮ್ಮ ಅನಹತ ಚಕ್ರದ ಅರಿವನ್ನು ಪಡೆದು ಕೊಳ್ಳುತ್ತಾರೆ.