ಮದರ್ಸ್ ಡೇ

ಮದರ್ಸ್ ಡೇ ಇತಿಹಾಸ ಬಹಳ ಪುರಾತನವಾದದ್ದು. ಕ್ರಿಸ್ತ ಪೂರ್ವ 250ರಲ್ಲಿಯೇ  ಗ್ರೀಕ್  ಮತ್ತು ರೋಂಗಳಲ್ಲಿ ಈ ಆಚರಣೆ ಇರುವುದು ತಿಳಿದು ಬರುತ್ತದೆ. ಗ್ರೀಕರ ವಸಂತೋತ್ಸವದ ಸಂದರ್ಭದಲ್ಲಿ ರಹಾ ಎಂಬ ಪೌರಾಣಿಕ ತಾಯಿಯ  ಉತ್ಸವವನ್ನು ನಡೆಸುತ್ತಿದ್ದರು. ರೋಂನಲ್ಲಿ ಸಿಬೆಲೆ ಎಂಬ ದೇವಿಯ  ಆರಾಧನೆ ನಡೆಯುತ್ತಾ ಇತ್ತು. ಭಾರತದಲ್ಲಿ ಕೂಡ ದೇವಿ ಆರಾಧನೆಗೆ ಬಹಳ ಪುರಾತನ  ಇತಿಹಾಸವಿದೆ. 1600ರ ಸುಮಾರಿಗೆ  ಇಂಗ್ಲೇಡಿನ ಮದರ್ಸ್ ಡೇ ಆಚರಣೆ ಕಾಣಿಸಿ ಕೊಂಡಿತು. ಆಗ ಲೆಂಟ್‍  ತಿಂಗಳ ನಾಲ್ಕನೇ ಶನಿವಾರ  ಇದನ್ನು ಆಚರಣೆ ಮಾಡಲಾಗುತ್ತಿತ್ತು. 1862ರಲ್ಲಿ ಅಮೆರಿಕಾದಲ್ಲಿ ಜೂಲಿಯಾ ವರ್ಡ್ ಹೂವೆ ಇಂತಹ  ಆಚರಣೆಗಾಗಿ ಹೋರಾಟ  ಮಾಡಿದಳು. 1870ರ ಬೋಸ್ಟನ್‍ ಘೋಷಣೆಯಲ್ಲಿ ಮದರ್ಸ್ ಡೇ ಆಚರಣೆ ಕೂಡ ಸೇರಿ ಕೊಂಡಿತ್ತು. ಆಧುನಿಕ ಕಾಲದ ಮದರ್ಸ್ ಡೇ ಆಚರಣೆಗೆ ನಾಂದಿ ಹಾಡಿದವಳು ಆನ್ ಜವಿರ್ಸ್. ತಾಯಿಯರ ತ್ಯಾಗ ಮತ್ತು ಮಮತೆಯ ಕುರುಹಾಗಿ ಇಂತಹ ದಿನ  ಇರಬೇಕು ಎನ್ನುವ ಹೋರಾಟವನ್ನು ಅವಳು ಮಾಡಿದಳು. ಕೊನೆಗೆ 1905ರಲ್ಲಿ ಮೇ8 ರಂದು ಮದರ್ಸ್ ಡೇ ಆಚರಿಸಲು ನಿರ್ಧಾರ ಮಾಡಲಾಯಿತು. ಅಲ್ಲಿಂದ ಮುಂದೆ ಅದು ನಿರಂತರವಾಗಿ ನಡೆಯುತ್ತಾ ಬಂದಿದೆ. ಜಗತ್ತಿನ 46 ದೇಶಗಳಲ್ಲಿ ಈ ಆಚರಣೆ ಇದ್ದು. ಬೇರೆ ಬೇರೆ ದಿನಗಳಲ್ಲಿ ಆಚರಣೆಗೊಳ್ಳುತ್ತಾ ಇದೆ. ಭಾರತದಲ್ಲಿ ಮೇ ತಿಂಗಳ ಎರಡನೇ ಭಾನುವಾರ  ಇದನ್ನು ಆಚರಣೆ ಮಾಡಲಾಗುತ್ತದೆ.