ಭಾರತ ಪ್ರವಾಸೋದ್ಯಮ ದಿನ

ಭಾರತದ ಪ್ರವಾಸೋದ್ಯಮವೂ ಈ ದಿಸೆಯಲ್ಲಿ ಸಾಕಷ್ಟು ಮುಂದುವರೆದಿದೆ.  ನಮ್ಮ ದೇಶವನ್ನು ಪ್ರಮುಖ ಪ್ರವಾಸೋದ್ಯಮ ರಾಷ್ಟ್ರವನ್ನಾಗಿಸುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಪ್ರಯತ್ನದ ಒಂದು ಭಾಗವೇ ರಾಷ್ಟ್ರೀಯ ಪ್ರವಾಸೋದ್ಯಮ ದಿನ. ಭಾರತದಲ್ಲಿ ಪ್ರತಿವರ್ಷ ಜನವರಿ 25 ಅನ್ನುಭಾರತ ಪ್ರವಾಸೋದ್ಯಮ ದಿನ  ಎಂದು 1994ರಿಂದ  ಆಚರಿಸಲಾಗುತ್ತದೆ.

ವಿವಿಧ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಜನರಿಗೆ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ಈ ಪ್ರವಾಸೋದ್ಯಮ ಎಂಬುದು ಬೇರೆ ಬೇರೆ ಸಂಸ್ಕೃತಿ, ಭಾಷೆ, ಧರ್ಮಗಳ ಜನರನ್ನು ಒಟ್ಟುಗೂಡಿಸುವ ಒಂದು ವೇದಿಕೆಯೂ ಹೌದು. ಇದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನೂ ಬೆಳೆಸುತ್ತದೆ. ಆದ್ದರಿಂದಲೇ ಪ್ರವಾಸೋದ್ಯಮವನ್ನು ಜಗತ್ತಿನ ಅದ್ಭುತವಾದ ಶಾಂತಿ ಅಭಿಯಾನ ಎಂದೇ ಹೇಳಲಾಗುತ್ತದೆ.