ಪ್ರ ಪಂಚವು 'ಕಾಮನ್ವೆಲ್ತ್
ದಿನ'ವನ್ನು ಮೇ24 ರಂದು ಆಚರಿಸುತ್ತದೆ.
ಇದು ರಾಷ್ಟ್ರ ಗಳು ಸ್ನೇಹ ಮತ್ತು ಸೌಹಾರ್ದದ ದೂರದ ಮತ್ತು ಆಳವಾದ ಬೇರೂರಿದ ಜಾಲಗಳ ಮೂಲಕ
ಒಟ್ಟಾಗಿ ಕೆಲಸ ಮಾಡಲು ಅವಕಾಶಗಳನ್ನು ನೀಡುತ್ತದೆ.
53 ಸ್ವತಂತ್ರ
ರಾಷ್ಟ್ರಗಳ ಒಕ್ಕೂಟ ಕಾಮನ್ವೆಲ್ತ್ ಸಮಾನತೆ ವೈವಿಧ್ಯತೆ ಮತ್ತು ಸಾಮಾನ್ಯ ಮೌಲ್ಯಗಳನ್ನು
ಹೆಚ್ಚಿಸಿಕೊಳ್ಳುವುದು ಪ್ರಜಾಪ್ರಭುತ್ವ ಶಾಂತಿ ಮತ್ತು ಅಭಿವೃದ್ಧಿಯನ್ನು ಮುಂದುವರಿಸಲು ಕೆಲಸ
ಮಾಡುತ್ತದೆ.
1898ರಲ್ಲಿ
ಒಂಟಾರಿಯೊದ ಡುಂಡಾಸ್ನಲ್ಲಿರುವ ಕೆನಡಾದ ಶಾಲೆಗಳಲ್ಲಿ ಮೇ 24 ರಂದು
ಅಂದರೆ ಸ್ಕೂಲ್ ಡೇ ದಿನದಂದು ಕ್ಲೆಮೆಂಟಿನ ಟ್ರೆನ್ಹೋಮ್ ಅವರು ಎಂಪೈರ್ ದಿನವನ್ನು
ಪರಿಚಯಿಸಿದರು. ಇದೇ ದಿನ 'ರಾಣಿ ವಿಕ್ಟೋರಿಯಾ' ಅವರ
ಹುಟ್ಟುಹಬ್ಬ ಕೂಡ. ಕೆನಡಾದಲ್ಲಿ ಪ್ರತಿ ವರ್ಷ ಈ ದಿನವನ್ನು ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತದೆ. ಎಂಪೈರ್
ದಿನದಂದು ಕೆನಡಾ ಶಾಲೆಗಳಲ್ಲಿ ದಿನಪೂರ್ತಿ ಸ್ಫೂರ್ತಿದಾಯಕ ಭಾಷಣ ಮತ್ತು ಕೆಲವು ಹಾಡುಗಳನ್ನು
ಹಾಡಲಾಗುತ್ತದೆ.
ಎಂಪೈರ್ ದಿನವನ್ನು ಮೇ 24 ರಂದು
ಆಚರಿಸಲಾಗುತ್ತದೆ. ಈ ದಿನದಂದು ಕೈತೋಟದ ಹಿಂದೆ ಪಟಾಕಿ ಸಿಡಲಾಗುತ್ತದೆ ಅಥವಾ ಸಮುದಾಯದಲ್ಲಿ
ನಡೆಯುವ ದೀಪೋತ್ಸವದಲ್ಲಿ ಭಾಗವಹಿಸಲಾಗುತ್ತದೆ.
ಬೋಯರ್ ಯುದ್ಧಕ್ಕಿಂತಲೂ ಮೊದಲು ರಾಣಿಯ ಜನ್ಮದಿನವನ್ನು ಆಚರಿಸಲಾಗುತ್ತಿತ್ತು. ಅದಾದ ನಂತರ ದಕ್ಷಿಣ ಆಫ್ರಿಕಾದ ಒಕ್ಕೂಟದಲ್ಲಿ ಕೂಡ ಆಚರಣೆ ಮಾಡಲಾಗುತ್ತಿತ್ತು. ಜನರಲ ಜಾನ್ ಸ್ಮಟ್ಸ್ ಅವರು ಕೂಡ 1870 ರಂದು ರಾಣಿಯ ಜನ್ಮದಿನದಂದೇ (ಮೇ 24) ಜನಿಸಿದ್ದರು. 1958ರಲ್ಲಿ ಎಂಪೈರ್ ದಿನವನ್ನು ಕಾಮನ್ವೆಲ್ತ್ ಡೇ ಆಗಿ ಮರು ನಾಮಕರಣ ಮಾಡಲಾಗಿದೆ.