ಪಣಂಬೂರಿನ ಓಡಿ
ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಜನಿಸಿದ ಮಗು ತನಿಯ ಕೊರಗ.
ಬಾಲ್ಯದಲ್ಲಿ ಪೋಷಕರ ವಿಯೋಗವಾಗಿ ಅನಾಥನಾದಾಗ ಮೈರಕ್ಕ ಬೈದದಿ
(ಭೈದರೆ ಜನಾಂಗ) ಎಂಬ ಮಹಿಳೆ ಸಾಕುತ್ತಾಳೆ. ಬೈದರೆ ಜನಾಂಗದ ಕೆಲಸ ಸೇಂದಿ ಮಾಡಿ
ಮಾರುವುದು, ತನಿಯ ಬಾಲ್ಯದಿಂದಲೇ ಅಸಾಮಾನ್ಯ ವ್ಯಕ್ತಿಯಾಗಿದ್ದ. ಒಮ್ಮೆ
ಸೇಂದಿ ತುಂಬು ಎಂದಾಗ, ಎಷ್ಟು ತುಂಬಿದರು ಖಾಲಿಯಾಗಲೆಯಲ್ಲ, ಕಡೆಗೆ ಕದ್ರಿ ಮಂಜುನಾಥನಿಗೆ
ಹರಕೆ ಹೊತ್ತು ಅಡಕೆ ಎಲೆಯಿಂದ ಪೇಂಣಲಿ ಮಾಡಿಸುತ್ತಾರೆ.
ಸಮಸ್ಯೆ ನಿವಾರಣೆಯಾಗುತ್ತದೆ, ಅದರ ಖುಷಿಗೆ ಮತ್ತೆ ಕಂಚಿನ ಪೇಂಣಲಿ ಮಾಡಿಸಲು 7 ಜನ
ಹೊರಲಾಗದ್ದನ್ನು ತನಿಯ ಒಬ್ಬನೇ ಹೊರುವ. ಇದೆ ರೀತಿ ಸೇಂದಿಗಾಗಿ ಮಾಗಿದ ಹಣ್ಣುಗಳನ್ನು ತರಲು
ಹೋದಾಗ ಮಾಯವಾದ/ಕಲ್ಲಾದ. ಈ ಕಥೆ ಪಾಡ್ದನ ಆಧಾರಿತ, ಹಲವು
ಭಿನ್ನಾಭಿಪ್ರಾಯಗಳಿವೆ. ತುಳುನಾಡಿನ ದೈವಗಳ ಬಗ್ಗೆ ಅಧಿಕೃತ ಲಿಖಿತ ದಾಖಲೆಗಳಿಲ್ಲ.
ಇಂದಿಗೂ
ಕಳೆದು ಹೋದ ವಸ್ತುಗಳಿಗೆ ಜನರು ಮೊದಲು ಹೇಳುವ ಹೆಸರು ಕೊರಗಜ್ಜ, ಆತನನ್ನು
ಮನದಲ್ಲೇ ನೆನೆದು ಮುಂದೆ ಹರಕೆ ತೀರಿಸುತ್ತಾರೆ. ಸಾಧ್ಯವಾದರೆ ಹೋಗಿ ತಾಂಬೂಲ, ಬೀಡಿ, ಸೇಂದಿ, ಮಧ್ಯ
ಇಟ್ಟು ಪ್ರಾರ್ಥಿಸುತ್ತಾರೆ. ನಮ್ಮಲ್ಲಿ ಕಾರ್ತವೀರ್ಯಾಜುನ
ತರ.ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ಬೆಂಕಿ ಕಿಡಿಯನ್ನು ಸಹ ಹೊತ್ತಿಸುವುದಿಲ್ಲ, ಹೊತ್ತಿಸಲು
ಬಾರದು ಎಂಬ ನಿಯಮವಿದೆ. ಗಾಡಿಗಳು ಆ ರಸ್ತೇಲಿ ದೀಪ ಹಾಕದೆ ಬರುತ್ತಾರೆ.!, ಅಕಸ್ಮಾತ್
ಯಾರಾದರೂ ಮೀರಿದರೆ ಅವರಿಗೆ ಕೆಡುಕೆ ಆಗಿದ್ದು ಅನೇಕ ಉದಾಹರಣೆ ಇವೆಯಂತೆ.
ಕುತ್ತಾರು
ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು
ಕೂರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ
ಪರ್ಯಾಯವಾಗಿ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು
ದೇವತೆಗಳನ್ನು ಓಡಿಸುತ್ತಾನೆ.!!. ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು
ಸೇರಿ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ. ಸಂಜೆಯ ನಂತರ
ಮಹಿಳೆಯರಿಗೆ ಪ್ರವೇಶವಿಲ್ಲ.
ಅಗೆಲು
ಸೇವೆಯಲ್ಲಿ ಹುರುಳಿ, ಬಸಳೆ, ಮೀನು, ಕೋಳಿ,ಉಪ್ಪಿನಕಾಯಿ, ಚಕ್ಕಲಿ,ಸೇಂದಿ, ಮಧ್ಯ, ತಾಂಬೂಲ
ಅಜ್ಜನಿಗೆ ಬಡಿಸಲಾಗುತ್ತದೆ.
ಮೈಯೆಲ್ಲಾ ಕಪ್ಪು ಬಣ್ಣ ಬಳೆದು, ಸೊಂಟಕ್ಕೆ ಪೇಂಣಲಿ (ಕವಚ) ಗೆಜ್ಜೆಯ ಸಮೇತ ಕಟ್ಟಿ ಕೈಯಲ್ಲೊಂದು ಬೆತ್ತವನ್ನು ಹಿಡಿದು ಕುಣಿಯುತ್ತಾರೆ.