ಕೊಟ್ಟೂರು ಕಾರ್ತಿಕೋತ್ಸವ

ಕೊಟ್ಟೂರು  ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂದೂ ಕರೆಯುತ್ತಾರೆ. ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವತಿ೯ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.