1971 ರ ಭಾರತ- ಪಾಕೀಸ್ತಾನ ಯುದ್ಧದ ಸಮಯದಲ್ಲಿ ಪಾಕ್ ಸೇನೆಯನ್ನು
ಸದೆಬಡಿಯಲು ಭಾರತೀಯ ಸೇನೆ ಒಂದು ವಿಭಿನ್ನ ವಿಧಾನವನ್ನು ಬಳಸಿತ್ತು. ನೌಕಾ ಕ್ಷಿಪಣಿಯ ಮೂಲಕ ಪಾಕಿಸ್ತಾನದ
ಆಯಿಲ್ ಟ್ಯಾಂಕ್ ಗಳನ್ನು ನಾಶಮಾಡಲಾಗಿತ್ತು. ಹಾಗೆಯೇ ಭೂಮಿಯ ಏಲೆ ದಾಳಿ ಮಾಡಲು ಅದು ವಿಮಾನವಾಹಕ ನೌಕೆಯನ್ನು
ಬಳಸಿತ್ತು. ಆ ಸಮಯದಲ್ಲಿ ಭಾರತ ತನ್ನ ಒಬ್ಬ ಸೈನಿಕರನ್ನೂ ಕಳೆದುಕೊಳ್ಳದೆ, ಶತ್ರು ರಾಷ್ಟ್ರದ 500
ಕ್ಕೂ ಹೆಚ್ಚು ಸೈನಿಕರನ್ನು ಸದೆಬಡಿದಿತ್ತು. ಆ ದಿನ ಡಿಸೆಂಬರ್ 4, 1971. ಆ ದಿನವನ್ನು ಪ್ರತಿವರ್ಷ
ಭಾರತೀಯ ನೌಕಾಪಡೆ ದಿನ ಎಂದು ಆಚರಿಸಲಾಗುತ್ತದೆ.
ಸಾಗರ್ ಪವನ್ ಹೆಗ್ಗಳಿಕೆ
ಇಡೀ ವಿಶ್ವದಲ್ಲಿ ಇರುವ ಕೆಲವೇ ನೇವಲ್ ಏರೋಬಾಟಿಕ್
ತಂಡಗಳಿವೆ. ಅವುಗಳಲ್ಲಿ ಒಂದು ಭಾರತದ್ದು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಅದನ್ನು ಸಾಗರ್
ಪವನ್ ಎಂದು ಕರೆಯಲಾಗುತ್ತದೆ.
ಉಪಗ್ರಹ ತಂತ್ರಜ್ಞಾನ
ಭಾರತೀಯ ನೌಕಾಪಡೆ ಜಿಸ್ಯಾಟ್(GSAT)- 7 ಎಂಬ ಮಲ್ಟಿ ಬ್ರಾಂಡ್ ಸಂವಹನ ಉಪಗ್ರಹವನ್ನು ಸಂವಹನಕ್ಕಾಗಿ ಉಪಯೋಗಿಸುತ್ತಿದೆ. ಇದು ಸಮುದ್ರದ ಮೇಲೆ ನಡೆಯುವ ಚಲನವಲನಗಳ ಪತ್ತೆಗೆ ಅತ್ಯಂತ ಸಹಕಾರಿಯಾಗಿದೆ.