ಹಿಂದೂ ಧರ್ಮದಲ್ಲಿ ಕಲಿಯುಗವು ನಾಲ್ಕು ಹಂತಗಳಲ್ಲಿ
ಕೊನೆಯದೆಂದು ಸಂಸ್ಕೃತ ಗ್ರಂಥಗಳಲ್ಲಿ ವಿವರಿಸಲಾದ 'ಯುಗಗಳ ಚಕ್ರ'ದ ಭಾಗವೇ 'ಕಲಿ ಯುಗ'. ಉಳಿದ ಯುಗಗಳನ್ನು ಸತ್ಯಕೃತಯುಗ, ತ್ರೇತಾಯುಗ ಮತ್ತು ದ್ವಾಪರ ಯುಗ ಎಂದು ಕರೆಯಲಾಗುತ್ತದೆ. ಕಲಿ ಯುಗದ "ಕಲಿ" ಎಂದರೆ "ಕಲಹ","ಜಗಳ", ಅಥವಾ "ವಿವಾದ". ಪುರಾಣದ
ಮೂಲಗಳ ಪ್ರಕಾರ ಕೃಷ್ಣನನಿರ್ಗಮನ ದ್ವಾಪರಯುಗದ ಅಂತ್ಯ ಮತ್ತು ಕಲಿಯುಗದ ಆರಂಭ.
ಕಲಿಯುಗವು ಸುಮಾರು 5,121 ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಕ್ರಿ.ಶ.2020ರ
ಪ್ರಕಾರ 426,879 ವರ್ಷಗಳಷ್ಟು ಉಳಿದಿದೆ. ಕಲಿಯುಗವುಕ್ರಿ.ಶ.428.899
ವರ್ಷದಲ್ಲಿ ಕೊನೆಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಸಂಭವನೀಯ ಪ್ರಾರಂಭ ಮತ್ತು ಅಂತ್ಯದಿನಾಂಕಗಳು
ಸೂರ್ಯ ಸಿದ್ಧಾಂತದ ಪ್ರಕಾರ, ಕಲಿಯುಗವು 18 ಫೆಬ್ರವರಿ
3102 ರ ಮಧ್ಯರಾತ್ರಿ (00:00) ಆರಂಭವಾಯಿತು. ಕೃಷ್ಣ ವೈಕುಂಠಕ್ಕೆ ಮರಳಿ ಭೂಮಿಯನ್ನು ಬಿಟ್ಟ
ದಿನಾಂಕವೂ ಇದೇ ಎಂದು ಪರಿಗಣಿಸಲಾಗಿದೆ.
ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ಆರ್ಯಭಟರ
ಪ್ರಕಾರ ಕಲಿಯುಗವು ಕ್ರಿ.ಪೂ. 3102 ರಲ್ಲಿ ಅಂದರೆ ಸುಮಾರು ಕ್ರಿ.ಶ. 499 ಯಲ್ಲಿ ಆರ್ಯಭಟೀಯಮ್
ಎಂಬ ಗ್ರಂಥವನ್ನು ರಚಿಸಿದನು. ಅದರಲ್ಲಿ ಕಲಿಯುಗದ ಆರಂಭದ ನಿಖರವಾದ ವರ್ಷವನ್ನು ಅವನು
ನೀಡುತ್ತಾನೆ.
ಕಲಿಯುಗದಲ್ಲಿ ಮಾನವ ನಾಗರಿಕತೆಯ ಆಧ್ಯಾತ್ಮಿಕ
ಅವನತಿಯಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ.