ಭೀಮನ ಅಮಾವಾಸ್ಯೆ ವ್ರತವನ್ನು ಹಿಂದೂ ಮಹಿಳೆಯರು
ಕರ್ನಾಟಕದಲ್ಲಿ ಆಷಾಢ ಅಮಾವಾಸ್ಯೆಯಂದು ಆಚರಿಸುತ್ತಾರೆ. ಇದು ಶಿವ ಮತ್ತು ಪಾರ್ವತಿ ದೇವಿಗೆ ಸಂಬಂಧಿಸಿದ್ದಾಗಿದೆ.
ಮಹತ್ವ ಮತ್ತು ಆಚರಣೆ
ಈ ದಿನದಂದು ಮಹಿಳೆಯರು ತಮ್ಮ ಪತಿ, ಸಹೋದರ
ಮತ್ತು ಕುಟುಂಬದ ಇತರ ಪುರುಷ ಸದಸ್ಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಮಣ್ಣಿನಿಂದ ತಯಾರಿಸಿದ
ಜೋಡಿ ದೀಪವನ್ನು ಆ ದಿನ ಉಪಯೋಗಿಸಲಾಗುತ್ತದೆ. ಇದು ಶಿವ ಮತ್ತು ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತದೆ
ಎಂದು ಜನರು ನಂಬುತ್ತಾರೆ. ಹಿಟ್ಟಿನಿಂದ ಮಾಡಿದ ದೀಪವನ್ನು ಈ ಸಂದರ್ಭದಲ್ಲಿ ತಯಾರಿಸಿ, ಕೋಪ, ಹತಾಶೆ
ಮುಂತಾದ ಕೆಟ್ಟ ಭಾವನೆಗಳನ್ನು ತಣಿಸಲು ದೀಪವನ್ನು ಉರಿಸಲಾಗುತ್ತದೆ ಎನ್ನುವರು.
ಈ ದಿನ ಕಡುಬು ಎಂಬ ಹೆಸರಿನ ಖಾದ್ಯವನ್ನು ತಯಾರಿಸಲಾಗುತ್ತದೆ. ಹಿಟ್ಟಿನ ಉಂಡೆಗಳು (ಕೆಲುವು ಕಡೆ ಭಂಡಾರ ಎಂಬ ಖಾದ್ಯ) ಅಥವಾ ನಾಣ್ಯಗಳನ್ನು ಅವುಗಳಲ್ಲಿ ಅಡಗಿಸಿಡಲಾಗುವುದು. ಇಡ್ಲಿ, ಮೋದಕ, ಗೋಧಿ ಉಂಡೆಗಳಲ್ಲೂ ನಾಣ್ಯಗಗಳನ್ನು ಇರಿಸಿ ತಯಾರಿಸಿರುತ್ತಾರೆ. ಸಹೋದರರು ಅಥವಾ ಯುವಕರು ಈ ಉಂಡೆಗಳನ್ನು ಭೀಮನ ಪೂಜೆಯ ಅಂತ್ಯಭಾಗದಲ್ಲಿ ಪುಡಿ ಪುಡಿ ಮಾಡಿ ನಾಣ್ಯಗಳನ್ನು ಅದರಲ್ಲಿರುವ ನಾಣ್ಯಗಳನ್ನು ಸ್ವೀಕರಿಸುತ್ತಾರೆ. ಇದೊಂದು ಸಹೋದರ-ಸಹೋದರಿಯರ ಭಾವಪೂರ್ಣ ನಂಬಿಕೆಯ ಸಂಕೇತವಾಗಿದೆ. ಕರ್ನಾಟಕದ ಹಲವೆಡೆ ಇದು 'ಭಂಡಾರ ಒಡೆಯುವ ಹಬ್ಬ' ಎಂದು ಪ್ರಸಿದ್ಧವಾಗಿದೆ.