1998ರಲ್ಲಿ ವಿಶ್ವ ನಗೆ ಅಥವಾ ನಗು ದಿನವು
ಸ್ಥಾಪಿತವಾಯಿತು ಮತ್ತು ಮೊದಲ ಸಂಭ್ರಮಾಚರಣೆಯನ್ನು ಜುಲೈ 28, 2008 ರಂದು ಭಾರತದ ಮುಂಬೈನಲ್ಲಿ, ವಿಶ್ವದಾದ್ಯಂತ
ನಗೆ ಯೋಗ ಆಂದೋಲನದ ಸಂಸ್ಥಾಪಕರಾದ ಡಾ. ಮದನ್ ಕಟಾರಿಯಾ ಅವರು ಆಯೋಜಿಸಿದ್ದರು.
ನಗೆಯು ವ್ಯಕ್ತಿಗಳು ತಮ್ಮನ್ನು ತಾವು ಬದಲಾಯಿಸಿಕೊಳ್ಳಲು
ಮತ್ತು ಜಗತ್ತನ್ನು ಶಾಂತಿಯುತ ಮತ್ತು ಧನಾತ್ಮಕ ರೀತಿಯಲ್ಲಿ ಬದಲಾಯಿಸಲು ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳನ್ನು
ಹೊಂದಿರುವ ಸಕಾರಾತ್ಮಕ ಮತ್ತು ಪ್ರಬಲ ಭಾವನೆ. ಒಳ್ಳೆಯ ನಗು ಒಂದು ಥೆರಪಿ ಇದ್ದಂತೆ. ಚಾರ್ಲಿ ಚಾಪ್ಲಿನ್
ಒಮ್ಮೆ ಹೇಳಿದ್ದರು- "ನಗುವಿಲ್ಲದ ದಿನ ವ್ಯರ್ಥ". ನಗುವು ತನ್ನದೇ ಆದ ಪ್ರಯೋಜನಗಳನ್ನು
ಹೊಂದಿದೆ, ಅದು ನಿಮ್ಮನ್ನು ಪುನಶ್ಚೇತನಗೊಳಿಸುತ್ತದೆ, ನಿಮ್ಮನ್ನು ಶಾಂತಗೊಳಿಸುತ್ತದೆ ಮತ್ತು ಅದು
ಅಮೂಲ್ಯವಾಗಿದೆ. ನಗುವನ್ನು ಎಂದಿಗೂ ಮರೆಯಬಾರದು ಮತ್ತು ನಗುವೇ ಅತ್ಯುತ್ತಮ ಔಷಧ.
ಆಚರಣೆ
ಮೇ ಮೊದಲ ಭಾನುವಾರ ವಿಶ್ವ ನಗು ದಿನ ಆಚರಿಸಲಾಗುತ್ತದೆ. ಭಾರತದಲ್ಲಿ, ಜನವರಿ 10, 1998 ರಂದು, ಮುಂಬೈನಲ್ಲಿ ವಿಶ್ವ ನಗು ದಿನವನ್ನು ಆಚರಿಸಲಾಯಿತು. ವಿಶ್ವ ಶಾಂತಿಗಾಗಿ ಮತ್ತು ನಗುವಿನ ಮೂಲಕ ಸಹೋದರತೆ ಮತ್ತು ಸ್ನೇಹದ ಭಾವನೆಯನ್ನು ಬೆಳೆಸುವುದಕ್ಕಾಗಿ ಈ ಆಚರಣೆಯನ್ನು ಗುರುತಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಒಟ್ಟುಗೂಡಿಸಿ ವಿಶ್ವ ನಗೆ ದಿನವನ್ನು ಹೆಚ್ಚಾಗಿ ಆಚರಿಸಲಾಗುತ್ತದೆ.