ಅಕ್ಷಯ ತೃತೀಯಾ

ಮಹತ್ವ

ವೈಶಾಖ ಎಂದು ಅಧಿಕೃತವಾಗಿ ಕರೆಯಲ್ಪಡುವ ಈ ಮಾಸವು ಶುಭ ಮತ್ತು ಹೊಸ ಆರಂಭಗಳೊಂದಿಗೆ ಅಕ್ಷಯ ತೃತೀಯಾ ಹಬ್ಬದಿಂದ ಪ್ರಾರಂಭವಾಗುತ್ತವೆ. ಅಕ್ಷಯದ ಅರ್ಥ "ಎಂದಿಗೂ ಕಡಿಮೆಯಾಗಲಾರದು" ಎಂದು. ಈ ಹಬ್ಬವು ಜೀವನದಲ್ಲಿ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಆದ್ದರಿಂದ ಅದರ ಶಾಶ್ವತ ಮೂಲಕ್ಕಾಗಿ ಪ್ರಾರ್ಥಿಸುತ್ತಾರೆ.

ಹಬ್ಬವು ಹಲವಾರು ಕಾರಣಗಳಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟ ಪರಶುರಾಮನ ಜನ್ಮ ದಿನವೆಂದು ಕೆಲವರು ನಂಬುತ್ತಾರೆ. ಶ್ರೀಕೃಷ್ಣನ ಮಿತ್ರ ಸುಧಾಮನು ಅವನನ್ನು ಭೇಟಿಮಾಡಲು ಹೋದ ದಿನ, ಶ್ರೀಕೃಷ್ಣ ಅವನಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಿದ ದಿನ.

ಸತ್ಯಯುಗದ ಅಂತ್ಯವಾದ ನಂತರ ತ್ರೇತಾಯುಗವು ಪ್ರಾರಂಭವಾದ ದಿನವಾಗಿದ್ದು, ದಿನ ಹೊಸತನವನ್ನು ತರುತ್ತದೆ ಎಂದು ನಂಬಿಕೆ. ಮಹಾಭಾರತ ಮಹಾಕಾವ್ಯವನ್ನು ಋಷಿ ವೇದವ್ಯಾಸರು ಶುಭ ದಿನದಂದು ಆರಂಭಿಸಿದರು ಎಂದು ಪ್ರತೀತಿ.

ಆಚರಣೆ

ಈ ದಿನ ಹೊಸ ಆರಂಭ, ಸಂಪತ್ತು, ಸಮೃದ್ಧಿಯ ಕಲ್ಪನೆಯನ್ನು ಪ್ರಸರಿಸಿದಂತೆ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಏಕೆಂದರೆ ಈ ದಿನವು ಸಂಪತ್ತಿನಿಂದ ಆಶೀರ್ವಾದ ಪಡೆಯುವ ಲಕ್ಷ್ಮೀದೇವಿಯ ಆಶೀರ್ವಾದದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಜನರು ತಮ್ಮ ಹೊಸ ಪಾಲುದಾರಿಕೆ ಅಥವಾ ಯೋಜನೆಗಳನ್ನು ಪ್ರಾರಂಭಿಸುತ್ತಾರೆ, ದೇವಿಯನ್ನು ಪ್ರಾರ್ಥಿಸುತ್ತಾರೆ, ಉಪವಾಸ ಆಚರಿಸುತ್ತಾರೆ. ಭಾರತದಲ್ಲಿ ಹಬ್ಬವು ಪ್ರಾದೇಶಿಕ ಭಿನ್ನತೆಯಿಂದ ಕೂಡಿರುತ್ತದೆ. ಆದರೆ ಈ ಹಬ್ಬದ ತಿರುಳು ಸಂಪತ್ತು ಮತ್ತು ಸಮೃದ್ಧಿಗಾಗಿ ಎಂಬುದು ಅಭಿಪ್ರಾಯ.