ನಿರ್ಜಲ ಏಕಾದಶಿ

ನಿರ್ಜಲ ಏಕಾದಶಿಯು ಹಿಂದೂ ಪವಿತ್ರ ದಿನವಾಗಿದ್ದು, ಜ್ಯೇಷ್ಠ ಮಾಸದ (ಮೇ/ಜೂನ್) 11ನೇ ಚಾಂದ್ರಮಾನ ದಿನ (ಏಕಾದಶಿ) ಬರುತ್ತದೆ. ಈ ಏಕಾದಶಿಯು ಈ ದಿನದಂದು ಜಲರಹಿತ (ನಿರ್ಜಲ) ಉಪವಾಸ. ಇದು ಅತ್ಯಂತ ಕಠಿಣವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ ಎಲ್ಲಾ 24 ಏಕಾದಶಿಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಧಾರ್ಮಿಕವಾಗಿ ಆಚರಿಸಿದರೆ, ವರ್ಷದಲ್ಲಿ ಎಲ್ಲಾ 24 ಏಕಾದಶಿಗಳನ್ನು ಆಚರಿಸುವುದರಿಂದ ಅತ್ಯಂತ ಪುಣ್ಯ ಮತ್ತು ಲಾಭದಾಯಕ ಎಂದು ಹೇಳಲಾಗುತ್ತದೆ.

ಕಥೆ

ನಿರ್ಜಲ ಏಕಾದಶಿಯನ್ನು ಪಾಂಡವ ಭೀಮ ಏಕಾದಶಿ ಅಥವಾ ಪಾಂಡವ ನಿರ್ಜಲ ಏಕಾದಶಿ ಎಂದೂ ಕರೆಯುತ್ತಾರೆ. ಈ ಹೆಸರು ಪಂಚ ಪಾಂಡವರ ಸಹೋದರರಲ್ಲಿ ಎರಡನೆಯವನಾದ ಭೀಮನಿಂದ ಬಂದಿದೆ. ಆಹಾರ ಪ್ರೇಮಿಯಾದ ಭೀಮನಿಗೆ ಎಲ್ಲ ಏಕಾದಶಿ ಉಪವಾಸಗಳನ್ನು ಆಚರಿಸಬೇಕೆಂದು ಬಯಸಿದರೂ, ಅವನ ಹಸಿವು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಭೀಮನು ವ್ಯಾಸ ಮಹರ್ಷಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಂಡ. ಮಹರ್ಷಿಯು ನಿರ್ಜಲ ಏಕಾದಶಿಯನ್ನು ವರ್ಷದಲ್ಲಿ ಒಂದು ದಿನ ಪೂರ್ತಿ ಉಪವಾಸವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು. ನಿರ್ಜಲ ಏಕಾದಶಿಯನ್ನು ಆಚರಿಸುವ ಮೂಲಕ ಭೀಮನು ಎಲ್ಲಾ 24 ಏಕಾದಶಿಗಳ ಸತ್ಫಲವನ್ನು ಪಡೆದನು.

ಅಭ್ಯಾಸಗಳು

ಇತರ ಏಕಾದಶಿಗಳಲ್ಲಿ ಆಹಾರ ಸೇವನೆಯನ್ನು ಆಚರಿಸಿದ್ದರೆ, ನಿರ್ಜಲಾ ಏಕಾದಶಿಯಂದು, ನೀರು ಸಹ ಸೇವಿಸದೇ ಉಪವಾಸವನ್ನು ಆಚರಿಸಲಾಗುತ್ತದೆ. ನಿರ್ಜಲ ಏಕಾದಶಿಯಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ 24 ಗಂಟೆಗಳ ಕಾಲ ಉಪವಾಸವನ್ನು ಆಚರಿಸಲಾಗುತ್ತದೆ. ಕೆಲವರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಇದನ್ನು ಆಚರಿಸುತ್ತಾರೆ.

ನಿರ್ಜಲ ಏಕಾದಶಿಯ ಹಿಂದಿನ ದಿನ, ಭಕ್ತನು ಸಂಧ್ಯಾವಂದನೆ ಮಾಡಿ, ಅನ್ನವಿಲ್ಲದೆ ಕೇವಲ ಒಂದು ಊಟವನ್ನು ಮಾತ್ರ ತೆಗೆದುಕೊಳ್ಳುತ್ತಾನೆ - ಏಕೆಂದರೆ ಅನ್ನವನ್ನು ತಿನ್ನುವುದನ್ನು ನಿಷೇಧಿಸಲಾಗುತ್ತದೆ. ಆಚಮಾನ ಶುದ್ಧೀಕರಣದ ಅಂಗವಾಗಿ ಭಕ್ತನಿಗೆ ಒಂದು ಹನಿ ನೀರು ಕುಡಿಯಲು ಮಾತ್ರ ಅನುಮತಿ ನೀಡಲಾಗಿದೆ. ಇತರ ಏಕಾದಶಿಗಳಂತೆ, ವಿಷ್ಣುವಿಗೆ ಪೂಜೆಯನ್ನು ನಡೆಸಲಾಗುತ್ತದೆ. ವಿಷ್ಣುವಿನ ಮೂರ್ತಿ ಅಥವಾ ಸಾಲಿಗ್ರಾಮ ಶಿಲೆಗೆ ಪಂಚಾಮೃತದೊಂದಿಗೆ ಅಭಿಷೇಕ ಮಾಡಿ ಹೂವಿನಿಂದ ಸಿಂಗರಿಸಿ ಆರತಿ ಬೆಳಗುತ್ತಾರೆ ಹಾಗೂ ದೇವರನ್ನು ಧ್ಯಾನಿಸುತ್ತಾರೆ. ಸಂಜೆ ವಿಷ್ಣುವನ್ನು ಕೈಯಲ್ಲಿ ದೂರ್ವೆ ಹುಲ್ಲಿನಿಂದ ಪೂಜಿಸುತ್ತಾರೆ. ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿ, ವಿಷ್ಣುವಿನ ಸ್ತುತಿಯನ್ನು ಹಾಡುತ್ತಾರೆ.

ಏಕಾದಶಿಯ ಇನ್ನೊಂದು ಲಕ್ಷಣವೆಂದರೆ ಬ್ರಾಹ್ಮಣರಿಗೆ ದಾನ ಕೊಡುವುದು. ಬಟ್ಟೆ, ಆಹಾರ, ಧಾನ್ಯ, ಛತ್ರಿ, ನೀರು ತುಂಬಿದ ಪಾತ್ರೆ, ಚಿನ್ನ ಇತ್ಯಾದಿಗಳನ್ನು ನಿರ್ಜಲ ಏಕಾದಶಿಯಂದು ದಾನ ಮಾಡುವುದು ವಾಡಿಕೆ.