ವಾಮನ ಜಯಂತಿ

ವಾಮನ ಜಯಂತಿ ಅಥವಾ ಪೂಜೆಯು ಹಿಂದೂ ಮಾಸದಲ್ಲಿ ಆಚರಿಸಲ್ಪಿರುವ ವಾರ್ಷಿಕ ಹಿಂದೂ ಹಬ್ಬವಾಗಿದೆ. ಈ ಉತ್ಸವವು ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾದ ವಾಮನನಿಗೆ ಸಮರ್ಪಿತವಾಗಿದೆ. ಸಾಮಾನ್ಯವಾಗಿ ದ್ವಾದಶಿ ತಿಥಿಯಲ್ಲಿ ಈ ಹಬ್ಬವನ್ನು ಆಚರಿಸಲಿರುವುದರಿಂದ ಈ ಹಬ್ಬವನ್ನು ವಾಮನ ದ್ವಾದಶಿ ಎಂದೂ ಕರೆಯುತ್ತಾರೆ.

ವಾಮನ ದ್ವಾದಶಿಗೆ ಮುಹೂರ್ತ

ಶುಕ್ಲ ಪಕ್ಷದ ದ್ವಾದಶಿ (ಹನ್ನೆರಡನೇ) ತಿಥಿಯಂದು ವಾಮನ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಶ್ರಾವಣ ನಕ್ಷತ್ರದಲ್ಲಿ ವಾಮನ ದೇವರು ಜನಿಸಿದ ಕಾರಣ, ಈ ಹಬ್ಬವನ್ನು ಸಾಮಾನ್ಯವಾಗಿ ಶ್ರಾವಣ ಮಹೂರ್ತದ ಸಮಯದಲ್ಲಿ ಆಚರಿಸಲಾಗುತ್ತದೆ.

ಆಚರಣೆಗಳು

ಈ ದಿನದಂದು ಭಗವಾನ್ ವಿಷ್ಣುವಿನ ಭಕ್ತರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ, ಭಗವಾನ್ ವಿಷ್ಣುವಿಗೆ ಅರ್ಘ್ಯವನ್ನು ಅರ್ಪಿಸುತ್ತಾರೆ. ವಾಮನ ಜಯಂತಿ ಪೂಜೆ ಮಾಡುವ ಸ್ಥಳದಲ್ಲಿ ಕಲಶವನ್ನು ಇಟ್ಟು ಪೂಜೆ ಮಾಡುತ್ತಾರೆ. ನಂತರ ವಾಮನ ದೇವರ ವಿಗ್ರಹವನ್ನು ಇರಿಸಿ ವಿಷ್ಣುವಿಗೆ ಪ್ರಿಯವಾದ ಎಲ್ಲಾ ವಸ್ತುಗಳನ್ನು ಅರ್ಪಿಸಿ ಪೂಜಿಸುತ್ತಾರೆ. ದಿನವಿಡೀ ಕಟ್ಟುನಿಟ್ಟಿನ ಉಪವಾಸ ಆಚರಿಸುವ ಸಂಕಲ್ಪವನ್ನು ಅವರು ಮಾಡುತ್ತಾರೆ. ವಾಮನನನ್ನು ಒಲಿಸಿಕೊಳ್ಳುವುದಕ್ಕಾಗಿ ಕೆಲವರು ಹವನವನ್ನು ಸಹ ಮಾಡುತ್ತಾರೆ. ಜನರು ಬಡವರಿಗೆ ಧಾನ್ಯ, ಹಣ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬಹುದು.