ಅಂತರ ರಾಷ್ಟ್ರೀಯ ಮಹಿಳಾ ದಿನ

ಪ್ರತಿ ವರ್ಷ ಮಾರ್ಚಿ ರಂದು ವಿಶ್ವದೆಲ್ಲೆಡೆ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ.

ಪೀಠಿಕೆ

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲೂ ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಪ್ರಗತಿಯನ್ನು ಗುರುತಿಸಿ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ" ಸಮಯದಲ್ಲಿ, ಮಾರ್ಚ್ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.

ಎರಡು ವರ್ಷದ ನಂತರ, ೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.

ಇತಿಹಾಸ

 "ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ.

ದಿನ ಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.

ಸಂಯುಕ್ತ ರಾಷ್ಟ್ರಗಳು ಮತ್ತು ಲಿಂಗ ಸಮಾನತೆ

೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವೃದ್ಧಿ ಕಾರ್ಯಕ್ರಮ ಹಾಗು ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮಾನವ ಹಕ್ಕುಗಳನ್ನ ಅಬಿನಂಧಿಸಿ ಮಹಿಳೆಯರು ಭಾಗವಹಿಸುವುದನ್ನ ಪ್ರೋತ್ಸಾಹಿಸಿದವು. ಮಹಿಳೆಯರನ್ನ ಪ್ರಬಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.