ಕಾಲಭೈರವ ಜಯಂತಿ


ಕಾಲಭೈರವ ಜಯಂತಿಯುಮಹಾಕಾಳ ಭೈರವಾಷ್ಠಮಿ ಅಥವಾಕಾಲಭೈರವಾಷ್ಠಮಿ ಎಂದೂ ಕರೆಯಲ್ಪಡುವವುದು. ಇದು ಭಗವಾನ್ ಶಿವನಿಗೆ ಸಮರ್ಪಿತವಾದ ಒಂದು ಹಿಂದೂ ಹಬ್ಬವಾಗಿದೆ. ಚಾಂದ್ರಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ದಿನವನ್ನು ಆಚರಿಸಲಾಗುತ್ತದೆ. ದಿನವು ಕಾಲಭೈರವದೇವರಿಗೆ ಸಮರ್ಪಿತವಾಗಿರುವ ಕಾರಣ, ಮಂಗಳವಾರ ಅಥವಾ ಭಾನುವಾರದಂದು ಬರುವ ದಿನವನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.

ಕಾಲಭೈರವ  ಜಯಂತಿಯ ಆಚರಣೆಗಳು:

Ø  ಕಾಲಭೈರವ ಜಯಂತಿಯ ದಿನ ಭಕ್ತರು ಶಿವ ಮತ್ತು ಪಾರ್ವತಿಯೊಂದಿಗೆ ಕಾಲಭೈರವನನ್ನು ಹಣ್ಣು, ಹೂವು ಮತ್ತು ಸಿಹಿತಿಂಡಿಗಳಿಂದ ಪೂಜಿಸುತ್ತಾರೆ. ಪೂಜೆ ಮುಗಿದ ನಂತರ ಕಾಲಭೈರವ ಕಥಾವನ್ನು ಸಹ ಅವರು ಜಪಿಸುತ್ತಾರೆ.

  • ಕಾಲಭೈರವ ಜಯಂತಿಯ ದಿನ ಭಕ್ತರು ಶಿವ ಮತ್ತು ಪಾರ್ವತಿಯೊಂದಿಗೆ ಕಾಲಭೈರವನನ್ನು ಹಣ್ಣು, ಹೂವು ಮತ್ತು ಸಿಹಿತಿಂಡಿಗಳಿಂದ ಪೂಜಿಸುತ್ತಾರೆ. ಪೂಜೆ ಮುಗಿದ ನಂತರ ಕಾಲಭೈರವ ಕಥಾವನ್ನು ಸಹ ಅವರು ಜಪಿಸುತ್ತಾರೆ.
  • ಕಾಲಭೈರವ ಜಯಂತಿಯ ದಿನ ಬೆಳಿಗ್ಗೆ ಎದ್ದು ಭಕ್ತರು ತಮ್ಮ ಮೃತ ಪೂರ್ವಜರಿಗೆ ವಿಶೇಷ ಪೂಜೆ ಮತ್ತು ವಿಧಿಗಳನ್ನು ನೆರವೇರಿಸಲು ಒಂದು ಧಾರ್ಮಿಕ ಸ್ನಾನವನ್ನು ಮಾಡುತ್ತಾರೆ.
  • ಕಾಲಭೈರವ  ಜಯಂತಿ ದಿನ ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿ, ಕಾಲಭೈರವ ಮತ್ತು ಶಿವನ ಕಥೆಗಳನ್ನು ಹೇಳುವರು. ಭೈರವನಿಗೆ ಸಮರ್ಪಿತವಾದ ಮಂತ್ರಗಳನ್ನು ಭಕ್ತಿಯಿಂದ ಪಠಿಸಿ, ಮಧ್ಯರಾತ್ರಿಯಲ್ಲಿ ಸಾಂಪ್ರದಾಯಿಕ ವಾದ್ಯಗಳಾದ ಡೋಲು, ಗಂಟೆ, ಶಂಖಗಳೊಂದಿಗೆ ಪೂಜೆಯನ್ನು ಮಾಡುತ್ತಾರೆ.
  • ಕೆಲವು ಭಕ್ತರು ಕಾಲಭೈರವ ಜಯಂತಿಯಂದು ಹಗಲಿನಲ್ಲಿ ಉಪವಾಸ ವ್ರತವನ್ನು ಸಹ ಆಚರಿಸುತ್ತಾರೆ. ವ್ರತ ಆಚರಿಸುವವನು ತನ್ನ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸರ್ವತ್ರ ಯಶಸ್ಸನ್ನು ಗಳಿಸುತ್ತಾನೆ ಎಂಬುದು ಒಂದು ಜನಪ್ರಿಯ ನಂಬಿಕೆಯಾಗಿದೆ.
  • ಭಗವಾನ್ ಕಾಲಭೈರವನು ನಾಯಿಯ ಮೇಲೆ ಸವಾರಿ ಮಾಡುತ್ತಾನೆಂದು ನಂಬಲಾಗಿದ್ದು, ಕೆಲವು ಪ್ರದೇಶಗಳಲ್ಲಿ ನಾಯಿಗಳಿಗೆ ದಿನದಂದು ಹಾಲು ಮತ್ತು ಸಿಹಿತಿಂಡಿಗಳನ್ನು ನೀಡಲಾಗುತ್ತದೆ.

ಭಾರತದಾದ್ಯಂತ ಇರುವ ಕಾಲಭೈರವ ದೇವಾಲಯಗಳಲ್ಲಿ ದಿನದಂದು ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ. ಸಂಜೆ ದೇವಸ್ಥಾನಗಳಿಗೆ ಭೇಟಿ ನೀಡಿ ಷೋಡಶೋಪಚಾರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕಾಲಭೈರವ ಜಯಂತಿ ಮಹತ್ವ:

ಕಾಲಭೈರವ ಜಯಂತಿಯ ದಿನವು ಭಗವಾನ್ ಶಿವನ ಅನುಯಾಯಿಗಳಿಗೆ ಬಹಳ ಮಹತ್ವವಿದೆ. ದಿನವು ಭಗವಾನ್ ಶಿವನಿಗೆ ಭಯವನ್ನು ಉಂಟುಮಾಡುವ ಕಾಲಭೈರವನ ಜನ್ಮದಿನ. ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತಮ್ಮ ಶ್ರೇಷ್ಠತೆಯನ್ನು ಕುರಿತು ಚರ್ಚಿಸುವಾಗ, ಭಗವಾನ್ ಶಿವನು ಬ್ರಹ್ಮನ ಕೆಲವು ಹೇಳಿಕೆಗಳಿಂದ ಕೋಪಗೊಂಡನು. ಆಗ ಭಗವಾನ್ ಭೈರವನು ಶಿವನ ಹಣೆಯಿಂದ ಪ್ರತ್ಯಕ್ಷನಾಗಿ ಬ್ರಹ್ಮನ ಒಂದು ತಲೆಯನ್ನು ಕಡಿದು ನಾಲ್ಕು ತಲೆಗಳಿಂದ ಬಿಟ್ಟು ಹೋದನು. ಪಾಪಿಗಳನ್ನು ಶಿಕ್ಷಿಸಲು ಸಲಾಕೆ ಹಿಡಿದು ನಾಯಿಯ ಮೇಲೆ ಸವಾರಿ ಮಾಡುವನೆನ್ನುವರು. ಕಾಲಭೈರವ ಜಯಂತಿಯ ಶುಭದಿನದಂದು ಭಕ್ತರು ತಮ್ಮ ಪುಣ್ಯಕ್ಕಾಗಿ ಕ್ಷಮೆಯಾಚಿಸಲು ಶಿವ ಮತ್ತು ಭೈರವನನ್ನು ಆರಾಧಿಸುತ್ತಾರೆ. ದಿನದಂದು ಕಾಲಭೈರವನನ್ನು ಪೂಜಿಸಿದಲ್ಲಿ ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗುತ್ತದೆ. ಕಾಲಭೈರವನನ್ನು ಪೂಜಿಸುವುದರಿಂದ ರಾಹು ಮತ್ತು ಶನಿಯ ಎಲ್ಲಾ ದೋಷಗಳನ್ನೂ ಅನೂರ್ಜಿತಗೊಳಿಸಬಹುದು ಎಂಬ ನಂಬಿಕೆಯೂ ಇದೆ.

ಕಾಲಭೈರವಾಷ್ಠಮಿಯ ಪುರಾಣದ ಕಥೆ:

ಒಮ್ಮೆ ವಿಷ್ಣು ಹಾಗು ಶಿವನಿಗೆ ಯಾರು ಹೆಚ್ಚು ಬಲಶಾಲಿಗಳೆನ್ನುವುದರ ಬಗ್ಗೆ ಚರ್ಚೆ ಆಗುತ್ತದೆ. ಶಿವನು ಎಲ್ಲಾ ಪಂಡಿತರನ್ನು ಹಾಗು ಋಷಿಮುನಿಗಳನ್ನು ಕರೆಸಿ ಒಂದು ಪರಿಹಾರವನ್ನು ಕಂಡು ಹಿಡಿಯಲು ಸಭೆಯನ್ನು ಸೇರಿಸುತ್ತಾನೆ. ಇದರಿಂದ ಒಂದು ಪರಿಹಾರವನ್ನು ಕಂಡು ಹಿಡಿದ ಮೇಲೆ ಪರಿಹಾರವನ್ನು ವಿಷ್ಣುವು ಒಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮನು ಒಪ್ಪುವುದಿಲ್ಲ. ಇದರಿಂದ ಅವಮಾನಿತನಾಗಿ, ಶಿವನಿಗೆ ಕೋಪ ಬಂದು ವಿನಾಶಕಾರಿ ಅವತಾರವನ್ನು ತಾಳುತ್ತಾನೆ. ಹೊಸ ಅವತಾರವನ್ನುಕಾಲಭೈರವ ಅವತಾರಎಂದು ಕರೆಯಲಾಯಿತು. ಅವತಾರದಲ್ಲಿ ಶಿವನು ಒಂದು ಶ್ವಾನದ ಮೇಲೆ ಕುಳಿತು ಕೈಯಲ್ಲೊಂದು ದಂಡವನ್ನು ಹಿಡಿದಿರುತ್ತಾನೆ. ಹಾಗಾಗಿ ಅವನಿಗೆದಂಡಾಧಿಪತಿಎಂದೂ ಕರೆಯಲಾಯಿತು. ಆತನ ಭಯಂಕರ ಅವತಾರವನ್ನು ನೋಡಿದ ದೇವತೆಗಳಿಗೆ ಭಯವಾಗುತ್ತದೆ. ಬ್ರಹ್ಮನು ಶಿವನ ಅವತಾರವಾದ ಕಾಲಭೈರವನ ಮುಂದೆ ಕ್ಷಮೆಯಾಚಿಸುತ್ತಾನೆ. ನಂತರ ಎಲ್ಲಾ ದೇವಾನುದೇವತೆಗಳಿಂದ ಸಂತೈಸಲ್ಪಟ್ಟ ಶಿವನು ತನ್ನ ನೈಜ ರೂಪಕ್ಕೆ ಮರಳುತ್ತಾನೆ.

ಕಾಲಭೈರವಾಷ್ಠಮಿ ಆಚರಣೆಯ ವಿಧಾನ:

ಕಾಲಭೈರವನನ್ನು ಪೂಜಿಸಲು ಭಕ್ತರು ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಕಾಲಭೈರವನೊಂದಿಗೆ ಶಿವನನ್ನು ಹಾಗೂ ಪಾರ್ವತಿಯನ್ನೂ ಕೂಡ ಪೂಜಿಸುತ್ತಾರೆ. ಪೂಜೆಯಲ್ಲಿ ಕಾಲಭೈರವನ ಕಥೆಯನ್ನು ಪಠಿಸುವುದೇ ಮುಖ್ಯವಾದ ಅಂಶ. ಕಾಲಭೈರವನ ವಾಹನ ಕರಿ ನಾಯಿ. ಆದ್ದರಿಂದ ಅಂದಿನ ದಿನ ಕರಿ ನಾಯಿಗೆ ಊಟ ಹಾಕುವುದು ಪ್ರತೀತಿ. ಇದಲ್ಲದೆ ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡಿ ನಂತರ ಶ್ರಾದ್ಧದ ಜೊತೆಗೆ ತರ್ಪಣ ಕೂಡ ಕೊಡುತ್ತಾರೆ. ಕೊನೆಯಲ್ಲಿ ಭೈರವನಾಥನಿಗೆ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.