ಗಣರಾಜ್ಯೋತ್ಸವ

ಭಾರತೀಯ ಗಣರಾಜ್ಯೋತ್ಸವನ್ನು ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುತ್ತದೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಆಗಸ್ಟ್ 15 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4, 1949ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್26, 1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26, 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಣೆ ಮಾಡಿತ್ತು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.

ಇತಿಹಾಸ

ಆಗಸ್ಟ್ 15 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ನಿರ್ಧಾರವನ್ನು ತೆಗೆದುಕೊಂಡು ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ದಿನದಂದೇ ಜಾರಿಗೆ ತರಲಾಯಿತು.

ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತಿ ದೊಡ್ಡದು

ಭಾರತೀಯ ಸಂವಿಧಾನ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಉದ್ದನೆಯ ಸಂವಿಧಾನ ಎಂದು ಗುರುತಿಸಲ್ಪಟ್ಟಿದೆ. ನಮ್ಮ ಸಂವಿದಾನದಲ್ಲಿ ಆರಂಭದ ಸಮಯದಲ್ಲಿ 395 ವಿಧಿಗಳಿದ್ದು, 22 ಭಾಗಗಳು ಮತ್ತು 8 ಸಂವಿಧಾನದ ಪರಿಚ್ಛೇದಗಳು ಸೇರಿವೆ. ಇದರಲ್ಲಿ ಏನಿಲ್ಲ ಅಂದರೂ ಸುಮಾರು 80000 ದಷ್ಟು ಪದಗಳಿವೆ. ಆದರೆ ಈಗಿನ ಅಂದರೆ ಸಪ್ಟಂಬರ್ 2012 ರ ಸಂವಿಧಾನ ತನ್ನಲ್ಲಿ ಪ್ರಸ್ತಾವನೆಯ ಭಾಗವನ್ನು ಹೊಂದಿ, 25 ಭಾಗಗಳಾಗಿ ವಿಂಗಡನೆಗೊಂಡು 448 ವಿಧಿಗಳನ್ನು, 12 ಸಂವಿಧಾನದ ಪರಿಚ್ಛೇದಗಳನ್ನು, 5 ಅನುಬಂಧ ಮತ್ತು 100 ತಿದ್ದುಪಡಿಗಳನ್ನು ಒಳಗೊಂಡಿದೆ. ನೆನಪಿರಲಿ, ಹೊಸ ಸಂವಿಧಾನ 1 ನೇ ಆಗಸ್ಟ್ 2015 ರಂದು ಜಾರಿಗೆ ಬಂದಿತು.

ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ 

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಸಂವಿಧಾನವನ್ನು ರೂಪುಗೊಳಿಸಲು ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳೇ ಬೇಕಾಯಿತು. ಆ ಸಮಯದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕಾನ್ಸ್ಟಿಟ್ಯುಯೆಂಟ್ ಅಸಂಬ್ಲಿ ಸಂವಿಧಾನವನ್ನು ರೂಪುಗೊಳಿಸಲು ಒಂದು ಡ್ರಾಫ್ಟಿಂಗ್ ಕಮಿಟಿಯನ್ನು ಏರ್ಪಾಡು ಮಾಡಿತು. ಈ ಕಮಿಟಿ ಸಂವಿಧಾನದ ಕರಡನ್ನು ಸಿದ್ಧಪಡಿಸಲು ಹಲವಾರು ಸಭೆಗಳನ್ನು ಕರೆದು, ಅನೇಕ ಮಜಲುಗಳನ್ನು ದಾಟಿ ಸರಿ ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.

ಐತಿಹಾಸಿಕ ರಾಜಪಥ ಜನವರಿ 26ರ ಪೆರೇಡಿಗೆ ಉದಾಹರಣೆಯಾಗಿದೆ. ಮೊದಲನೆಯ ಗಣರಾಜ್ಯೋತ್ಸವದ ಪೆರೇಡನ್ನು ಹೊಸ ದೆಹಲಿಯಲ್ಲಿ 1950 ರಲ್ಲಿ ನಡೆಸಲಾಯಿತು. ಆ ಸಮಯದಲ್ಲಿ ರಾಜೇಂದ್ರ ಪ್ರಸಾದ್ ರವರು ರಾಷ್ಟ್ರಪತಿಗಳಾಗಿದ್ದರು.


ಭಾರತದ ರಾಷ್ಟ್ರಪತಿಗಳು ತಿರಂಗ ರಾಷ್ಟ್ರ ಧ್ವಜವನ್ನು ಹಾರಿಸುವ ಸಮಯದಲ್ಲಿ ನೌಕಾದಳ ಮತ್ತು ಸೇನಾದಳ 21 ಗನ್ನುಗಳಿಂದ ಮದ್ದು ಹಾರಿಸಿ ಅಭಿನಂದನೆ ಸಲ್ಲಿಸುತ್ತಾರೆ. ಇದು ನೋಡಲು ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಮತ್ತು ಮೈ ರೋಮಾಂಚನಗೊಳ್ಳುತ್ತದೆ.