ಮಧುಮೇಹ ಹಾಗೂ ಅದಕ್ಕೆ ಸಂಬಂಸಿದ ವಿಷಯಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 1991ರಲ್ಲಿ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು. ವಿಜ್ಞಾನಿ ಸರ್ ಫೆಡ್ರಿಕ್ ಬೆಂಟಿಂಗ್ ಅವರು ಪ್ರಥಮ ಬಾರಿಗೆ ಮಧುಮೇಹಕ್ಕೆ ನೀಡುವ 'ಇನ್ಸುಲಿನ್' ಸಂಶೋಸಿದರು. ಬೆಂಟಿಂಗ್ ಅವರು ಜನಿಸಿದ ದಿನ ನವೆಂಬರ್ 14. ಅವರ ಸವಿ ನೆನಪಿಗಾಗಿ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ.
ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಮಧುಮೇಹವು ಇಂದು ವಿಶ್ವದಾದ್ಯಂತ ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ವಿಶ್ವದ 160 ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಧುಮೇಹದ ಬಗ್ಗೆ ಇಲ್ಲಿ ವಿಶ್ವದ ಗಮನ ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಅದೇ ರೀತಿಯಾಗಿ ಸಾರ್ವಜನಿಕ ಹಾಗೂ ರಾಜಕೀಯವಾಗಿಯೂ ಇದರ ಬಗ್ಗೆ ಗಮನಿಸುವಂತೆ ಆಗಬೇಕು ಎನ್ನುವುದೇ ವಿಶ್ವ ಮಧುಮೇಹ ದಿನದ ಉದ್ದೇಶ.