ಪ್ರತಿ ವರ್ಷ ಜೂನ್ 14ರಂದು ವಿಶ್ವದಾದ್ಯಂತ
ಇರುವ ರಾಷ್ಟ್ರಗಳು ವಿಶ್ವ ರಕ್ತ ದಾನಿಗಳ ದಿನವನ್ನು ಆಚರಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ, ರೆಡ್
ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಸಂಯುಕ್ತ ಆಶ್ರಯದಲ್ಲಿ 2005ರಲ್ಲಿ ಮೊದಲ ಬಾರಿಗೆ ಈ
ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅವಶ್ಯಕತೆಯ ಬಗ್ಗೆ ಜಾಗೃತಿ
ಮೂಡಿಸಲು ಮತ್ತು ರಕ್ತದಾನಿಗಳ ಸ್ವಯಂ ಪ್ರೇರಿತ, ಜೀವ ರಕ್ಷಕ ರಕ್ತದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಲು
ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ವ ರಕ್ತದಾನಿಗಳ ದಿನವು 11 ಅಧಿಕೃತ ಜಾಗತಿಕ ಸಾರ್ವಜನಿಕ
ಆರೋಗ್ಯ ಅಭಿಯಾನಗಳಲ್ಲಿ ಒಂದಾಗಿದೆ.
ಇತಿಹಾಸ
ವಿಶ್ವ ರಕ್ತದಾನಿಗಳ ದಿನವನ್ನು ಜೂನ್ 14 ರಂದು
ವಿಶ್ವದಾದ್ಯಂತ ಜನರು ಆಚರಿಸುತ್ತಾರೆ. ಇದನ್ನು ಕಾರ್ಲ್ ಲ್ಯಾಂಡ್ ಸ್ಟೀನರ್ನ ಹುಟ್ಟುಹಬ್ಬದ ದಿನ ಜೂನ್
14, 1868 ರಂದು ಆಚರಿಸಲಾಗುತ್ತದೆ.
ವಿಶ್ವ ರಕ್ತದಾನಿಗಳ ದಿನವು ಕಾರ್ಲ್ ಲ್ಯಾಂಡ್
ಸ್ಟೀನರ್ನ (‘ಎಬಿಓ’ ರಕ್ತ ಗುಂಪು ವ್ಯವಸ್ಥೆಯ ಆವಿಷ್ಕಾರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ)
ಜನ್ಮದಿನವನ್ನು ಆಚರಿಸಲು ಮತ್ತು ಸ್ಮರಿಸಲು ಎಲ್ಲಾ ದಾನಿಗಳಿಗೆ ಒಂದು ಅಮೂಲ್ಯ ಅವಕಾಶ.
ಪ್ರಾಮುಖ್ಯತೆ
ಯೋಜಿತ ಚಿಕಿತ್ಸೆಗಳು ಮತ್ತು ತುರ್ತು ಮಧ್ಯಸ್ಥಿಕೆಗಳಿಗೆ ರಕ್ತವು ಒಂದು ಅವಶ್ಯಕ ಸಂಪನ್ಮೂಲವಾಗಿದೆ. ಇದು ದೀರ್ಘಕಾಲ ಜೀವಿಸಲು ಮತ್ತು ಹೆಚ್ಚಿನ ಗುಣಮಟ್ಟದ ಜೀವನ ನಡೆಸಲು ಮಾರಣಾಂತಿಕ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುತ್ತದೆ. ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರsಚಿಕಿತ್ಸಾ ವಿಧಾನಗಳನ್ನು ಇದು ಬೆಂಬಲಿಸುತ್ತದೆ.