ನಾರದ ಜಯಂತಿ

ನಾರದ ಜಯಂತಿಯು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಇದು ದೇವರ್ಷಿ ನಾರದ ಮುನಿಯ ಜನ್ಮ ದಿನವನ್ನು ಆಚರಿಸುವ ಒಂದು ಸಂದರ್ಭ. ನಾರದನನ್ನು ದೇವರ ದೂತನೆಂದು ಕರೆಯಲಾಗುತ್ತದೆ.

ಮಹತ್ವ

ಪುರಾಣಗಳ ಪ್ರಕಾರ, ನಾರದ ಮುನಿ ಯಾವುದೇ ನಿರ್ದಿಷ್ಟ ಜಗತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪೃಥ್ವಿ, ಆಕಾಶ ಮತ್ತು ಪಾತಾಳ ಸೇರಿದಂತೆ ವಿವಿಧ ಲೋಕಗಳಲ್ಲಿ ಸಂಚರಿಸಲು ಅವರು ಸ್ವತಂತ್ರರಾಗಿದ್ದರು. ವೀಣೆ ನುಡಿಸುತ್ತಾ, ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಕಾಣಿಸಿಕೊಂಡು, ತಮ್ಮ ಸಂದೇಶವನ್ನು ಹಾಡುಗಳ ಮೂಲಕ ಪ್ರಚುರಪಡಿಸುವುದು ಅವರ ರೀತಿಯಾಗಿತ್ತು.

ನಾರದ ಜಯಂತಿಯು ವೈಶಾಖ ಮಾಸದ ಕೃಷ್ಣಪಕ್ಷದ ಮೊದಲ ದಿನ (ಪ್ರತಿಪತ್ ತಿಥಿ) ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ದಿನವನ್ನು ಜೂನ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ.

ಪೂಜಾ ವಿಧಿ

- ಸೂರ್ಯೋದಯಕ್ಕೂ ಮುನ್ನ ಬೆಳಿಗ್ಗೆ ಎದ್ದು ಸ್ನಾನ ಮಾಡುತ್ತಾರೆ.

-ಸ್ನಾನದ ನಂತರ, ಶುಭ್ರವಾದ ವಸ್ತ್ರವನ್ನು ಧರಿಸುತ್ತಾರೆ.

-ನಾರದ ಮುನಿಯು ಸ್ವತಃ ದೇವತೆಯ ಪರಮಭಕ್ತನಾಗಿದ್ದ ಕಾರಣ ವಿಷ್ಣುವನ್ನು ಪ್ರಾರ್ಥಿಸುತ್ತಾರೆ.

-ನಂತರ ಚಂದನ, ತುಳಸಿ ಎಲೆ, ಕುಂಕುಮ, ಹೂವು ಹಾಗೂ ಭಕ್ಷ್ಯಗಳನ್ನುಗಳನ್ನು ದೇವರಿಗೆ ಅರ್ಪಿಸುತ್ತಾರೆ.

-ಭಕ್ತರು ನಾರದರನ್ನು ಸಂತೋಷಪಡಿಸಲು ನಾರದ ಜಯಂತಿ ಉಪವಾಸವನ್ನೂ ಆಚರಿಸುತ್ತಾರೆ. ನಂತರ ಪ್ರಾರ್ಥನೆ ಮತ್ತು ಆರತಿಯ ಹಾಡುಗಳನ್ನು ಹಾಡುತ್ತಾರೆ.