ಪಾಶ್ವ೯ನಾಥ ಜನ್ಮದಿನ

ಪಾಶ್ವ೯ನಾಥರು(ಕ್ರಿ.ಪೂ.೯ನೇ ಶತಮಾನ) ಜೈನ ಧರ್ಮದ ೨೩ನೇ ತೀರ್ಥಂಕರ. ಜೈನ ಧರ್ಮದ ಅನುಸಾರ ೨೪ನೇ ತೀರ್ಥಂಕರ ಮಹಾವೀರರಿಗಿಂತ ೨೫೦ ವಷ೯ಹಳ ಹಿಂದೆ ಜೀವಿಸಿದ್ದರು.

ಇವರ ಜನ್ಮ ಕಾಶೀನಗರದಲ್ಲಾಯಿತು. ಇವರು ರಾಜಪುತ್ರರಾಗಿದ್ದರು. ಬಾಲ್ಯದಿಂದಲೇ ವೈರಾಗ್ಯದ ಕಡೆ ಮನಸ್ಸು ಹರಿದಿತ್ತು. ಒಮ್ಮೆ ಗಂಗಾ ನದಿಯ ತೀರದಲ್ಲಿ ವಾಯುವಿಹಾರ ಮಾಡುತ್ತಿರುವಾಗ ಕೆಲವುಮಂದಿ ತಾಪಸಿಗಳು ಬೆಂಕಿಯನ್ನುರಿಸಿ ತಪಸ್ಸನ್ನಾಚರಿಸುತ್ತಿದ್ದರು. ಇವರು ಅವರನ್ನು ಕಟ್ಟಿಗೆಗೆಳನ್ನುರಿಸಿ ಏಕೆ ಜೀವ ಹಿಂಸೆ ಮಾಡುತ್ತಿರುವರೆಂದು ಕೇಳಿದರು. ರಾಜಕುಮಾರರ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸಿದ ತಾಪಸಿಗಳು 'ಜೀವ ಎಲ್ಲಿದೆ?'ಎಂದು ಕೇಳಿದರು. ಪಾರ್ಶ್ವನಾಥರು ತಾಪಸಿಗಳ ಬಳಿಯಿದ್ದ ಕೊಡಲಿಯಿಂದ ಒಂದು ಕಟ್ಟಿಗೆಯನ್ನು ಸೀಳಲು ಸರ್ಪ ಮತ್ತು ಸರ್ಪಿಣಿಯ ಸುಡುತ್ತಿರುವ ಜೊತೆಯೊಂದು ಕಾಣಿಸಿತು. ಇನ್ನು ಅವು ಬದುಕಲಾರವೆಂದು ತಿಳಿದು ಅವುಗಳಿಗೆ ಪಂಚನಮಸ್ಕಾರ ಮಂತ್ರವನ್ನು ಉಪದೇಶಿಸಿದರು.

ಘಟನೆಯಿಂದ ಅವರಿಗೆ ಬಹಳ ದಃಖವಾಯಿತು. ಜೀವನದ ನಶ್ವರತೆಯನ್ನು ತಿಳಿದು ವೈರಾಗ್ಯ ಹೊಂದಿ ಕೊಡಲೇ ದೀಕ್ಷೆಯನ್ನು ಸ್ವೀಕರಿಸಿದರು. ಇವರ ಸ್ಮರಣಾರ್ಥ ದಿನ ಪಾರ್ಶ್ವನಾಥ ಜಯಂತಿ ಆಚರಿಸಲಾಗುತ್ತದೆ.