ಹಿಂದೂ ದೇವರು ಶಿವನಿಗೆ ಅರ್ಪಿತವಾಗಿರುವ ಕಾವೂರು ಮಹಾಲಿಂಗೇಶ್ವರ ದೇವಸ್ಥಾನವು ಮಂಗಳೂರಿನಿಂದ 5 ಕಿ.ಮೀ ದೂರದಲ್ಲಿರುವ ಕಾವೂರು ಎಂಬಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಮುಖ ಶಿವ ದೇವಾಲಯವು ವಿಶಾಲವಾದ ಸರೋವರದ ಬಳಿ ಇದೆ.
ಈ ದೇವಾಲಯದಲ್ಲಿ ಪೂಜಿಸಲ್ಪಡುವ ಪ್ರಮುಖ ದೇವತೆಯೆಂದರೆ ಮಹಾಲಿಂಗೇಶ್ವರ. ಈ ದೇವಾಲಯವು ಸುಮಾರು 600 ವರ್ಷಗಳಿಗೂ ಹಳೆಯದು ಎಂದು ನಂಬಲಾಗಿದೆ. ಇದು ತುಳುನಾಡಿನಲ್ಲಿ ಪ್ರಮುಖ ಆರಾಧನಾ ಕೇಂದ್ರವಾಗಿತ್ತು.
ಶಿವಾಲಯವು ಪೂರ್ವಾಭಿಮುಖವಾಗಿದ್ದು ಋಷಿ ಕುವೇರನಿಂದ ಸ್ಥಾಪಿತವಾಗಿದೆ. ಈ ಸ್ಥಳವು ಕುವೇರ ಋಷಿಯಿಂದ ತನ್ನ ಹೆಸರನ್ನು ಪಡೆದುಕೊಂಡಿತು. ಇಂದಿನ ದೇವಾಲಯ ಇರುವ ಸ್ಥಳದಲ್ಲಿ ಶಿವನು ಋಷಿಗೆ ದರ್ಶನ ವನ್ನು ನೀಡಿದನು ಎಂದು ನಂಬಲಾಗಿದೆ.
ಈ ದೇವಾಲಯದಲ್ಲಿ ನ೦ಬಿಕೆಯ ಪ್ರಮುಖ ಹಬ್ಬಗಳೆಂದರೆ ಮಹಾಶಿವರಾತ್ರಿ, ಶ್ರೀ ಕೃಷ್ಣ ಜಯಂತಿ ಮತ್ತು ವಾರ್ಷಿಕ ದೇವಸ್ಥಾನ ಉತ್ಸವ.