ಇಡಗುಂಜಿ ವಿನಾಯಕ ರಥ

ಶ್ರೀ ವಿನಾಯಕ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಪಟ್ಟಣದಲ್ಲಿರುವ ವಿನಾಯಕ ದೇವರಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ.

ಇರುವ ಸ್ಥಳ

ದೇವಾಲಯವಿರುವ ಇಡಗುಂಜಿಯು ಭಾರತದ ಪಶ್ಚಿಮ ಕರಾವಳಿಯ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಅರಬ್ಬೀ ಸಮುದ್ರವನ್ನು ಸೇರುವ ಶರಾವತಿ ನದಿಯ ಸಮೀಪದಲ್ಲಿದೆ. ಇದು ಮಾವಿನಕಟ್ಟೆಗೆ ಹತ್ತಿರವಿದ್ದು ಹೊನ್ನಾವರದಿಂದ 14 ಕಿ.ಮೀ, ನಾವಿಲಗಾಂವದಿಂದ 28 ಕಿ.ಮೀ, ಗೋಕರ್ಣದಿಂದ 65 ಕಿ.ಮೀ ಮತ್ತು ರಾಷ್ಟ್ರೀಯ ಹೆದ್ದಾರಿ 17 (ಭಾರತ) ದಿಂದ 7 ಕಿ.ಮೀ.

ಕೇಂದ್ರ ಬಿಂದು

ಇಡಗುಂಜಿ ದೇವಾಲಯದ ಮೂರ್ತಿಯು 4-5 (ಕ್ರಿ.ಶ.) ನೇ ಶತಮಾನ ಸಮೀಪದ ಇಡಗುಂಜಿಯಲ್ಲಿರುವ ಗೋಕರ್ಣ ಗಣಪತಿ ದೇವಸ್ಥಾನದ ಮಾದರಿಯಲ್ಲಿಯೇ, ದ್ವಿಭುಜ ಶೈಲಿಯಲ್ಲಿ ಗಣೇಶನ ವಿಗ್ರಹವನ್ನು ಕಾಣಬಹುದು. ಎರಡು ಕೈಗಳನ್ನು ಹೊಂದಿರುವ ಅವನು ಕಲ್ಲಿನ ಚಪ್ಪಡಿಯ ಮೇಲೆ ನಿಂತಿದ್ದಾನೆ. ಅವನ ಬಲಗೈಯಲ್ಲಿ ಕಮಲದ ಮೊಗ್ಗು, ಇನ್ನೊಂದು ಕೈಯಲ್ಲಿ ಮೋದಕ ಸಿಹಿಯನ್ನು ಹಿಡಿದಿರುತ್ತಾನೆ. ಯಜ್ಞೋಪವೀತ (ಪವಿತ್ರದಾರ) ಧರಿಸುತ್ತಾನೆ. ಗಣೇಶನನ್ನು ಸಣ್ಣ ಘಂಟೆಗಳ ಹಾರದಿಂದ ಅಲಂಕರಿಸಲಾಗುತ್ತದೆ. ಗಣೇಶನ ವಾಹನ ಇಲಿಯನ್ನು ಕಾಣಬಹುದು. 83 ಸೆಂಟಿಮೀಟರ್  ಎತ್ತರ ಮತ್ತು 59 ಸೆಂಟಿಮೀಟರ್ ಅಗಲ ಇರುವ ಪ್ರತಿಮೆಯನ್ನು ಕಲ್ಲಿನ ಮೇಲೆ ಇರಿಸಲಾಗಿದೆ.

ಪೂಜೆ

ಇಡಗುಂಜಿ ದೇವಸ್ಥಾನವು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ, ಸ್ವತಂತ್ರವಾಗಿ ಗಣೇಶನಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಒಂದಾಗಿದೆ.

ಇಡಗುಂಜಿ ಗಣೇಶನು ಸ್ಮಾರ್ತ ಹವ್ಯಕ ಬ್ರಾಹ್ಮಣರ ಪ್ರಮುಖ ದೇವತೆ. ಕರ್ನಾಟಕದ ದಲಿತ ಸಮುದಾಯವಾದ ಬಂಧೀಗಳು, ಸೌಹಾರ್ದಯುತ ವಿವಾಹ ಸಂಧಾನದ ನಂತರ ದೇವಿಯ ಆಶೀರ್ವಾದ ವನ್ನು ಪಡೆಯುತ್ತಾರೆ. ವಧು-ವರರ ಕುಟುಂಬದವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಗಣೇಶನ ಪ್ರತಿ ಕಾಲುಗಳ ಮೇಲೆ ಚೀಟಿಇಟ್ಟು ಪೂಜೆಯನ್ನು ಮಾಡಲಾಗುತ್ತದೆ. ವಿವಾಹವನ್ನು ದೈವಾನುಮತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇಡಗುಂಜಿ ಭಾರತದ ಪಶ್ಚಿಮ ಕರಾವಳಿಯ ಆರು ಗಣೇಶ ದೇವಾಲಯಗಳ ಒಂದು ಭಾಗವಾಗಿದೆ. ಕಾಸರಗೋಡು, ಮಂಗಳೂರು, ಆನೇಗುಡ್ಡೆ, ಕುಂದಾಪುರ, ಇಡಗುಂಜಿ, ಗೋಕರ್ಣದವರೆಗಿನ ಪ್ರದೇಶ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಒಂದೇ ದಿನದಲ್ಲಿ ಆರು ದೇವಸ್ಥಾನಗಳನ್ನು ತನ್ನ ಕುಟುಂಬ ಸಮೇತ ಭೇಟಿ ನೀಡುವ ಯಾವುದೇ ವ್ಯಕ್ತಿ ವಿಶೇಷ ಆಶೀರ್ವಾದವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.

ಗಣೇಶನಪೂಜೆಯಲ್ಲಿ ಭಕ್ತರು ನೀಡುವ ಅತ್ಯುತ್ತಮ ಪೂಜೆಯೆಂದರೆ ಗರಿಕೆ ಹುಲ್ಲು ಸೇವೆ. ಭಕ್ತರು ಅನೇಕ ಪೂಜೆಗಳನ್ನು ಸಹ ಮಾಡಬಹುದು.